ಹೊನ್ನಾವರ : ಉತ್ತರ ಕನ್ನಡದಲ್ಲಿ ಕೆಲದಿನಗಳಿಂದ ಕಡಿಮೆಯಾಗಿದ್ದ ಅಕ್ರಮ ಗೋವುಗಳ ಸಾಗಾಟ ಹಾಗೂ ಗೋಮಾಂಸ ಸಾಗಾಟ ಪ್ರಕರಣ ಇದೀಗ ಮತ್ತೆ ಬೆಳಕಿಗೆ ಬಂದಿದೆ. ತಾಲೂಕಿನ ಬೈಲಗದ್ದೆ ಸಮೀಪ ಅತಿವೇಗ ಅಜಾಗರೂಕತೆಯಿಂದ ದ್ವಿಚಕ್ರ ವಾಹನಕ್ಕೆ ಅಪಘಾತಪಡಿಸಿ, ವಾಹನವನ್ನು ಸ್ಥಳದಲ್ಲಿ ನಿಲ್ಲಿಸದೇ ಚಲಾಯಿಸಿಕೊಂಡ ಬಂದ ಹಿನ್ನಲೆ ಪಟ್ಟಣದ ಗೇರುಸೊಪ್ಪಾ ವೃತ್ತದ ಬಳಿ ಪೊಲೀಸರು ತಪಾಸಣೆ ನಡೆಸಿದಾಗ ಟಾಟಸುಮೊ ವಾಹನದಲ್ಲಿ 200 ಕೆ.ಜಿ ಗೊಮಾಂಸವನ್ನು ಅನಧಿಕೃತವಾಗಿ ಸಾಗಾಟ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.
ಟಾಟಾಸುಮೊದಲ್ಲಿ ಇರುವ ಆರೋಪಿಗಳು ವಾಹನವನ್ನು ಸ್ಥಳದಲ್ಲೆ ಬಿಟ್ಟು ಪರಾರಿಯಾಗಿದ್ದಾರೆ. 200 ಕೆ.ಜಿ ಮೌಂಸದ ಮೌಲ್ಯ 35 ಸಾವಿರ ಎಂದು ಅಂದಾಜಿಸಲಾಗಿದೆ. ವಾಹನವನ್ನು ವಶಕ್ಕೆ ಪಡೆದಿರುವ ಹೊನ್ನಾವರ ಪೊಲೀಸರು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.