ಕುಮಟಾ: ತಾಲೂಕಿನ ಮಿರ್ಜಾನಲ್ಲಿ ಎಸ್.ಪಿ.ಟಿ.ಮಿರ್ಜಾನ ಮತ್ತು ಕುಮಟಾ ಅಮೇಚುರ ಕಬಡ್ಡಿ ಅಸೋಸಿಯೇಷನ್ ಇವರ ಸಹಯೋಗದಲ್ಲಿ ಶ್ರೀ ಶಾಂತಿಕಾ ಪ್ರೊ 2022 ಲೀಗ್ ಕಬಡ್ಡಿಯನ್ನು ಆಯೋಜಿಸಲಾಗಿತ್ತು.ಈ ಕಾರ್ಯಕ್ರಮದ ಸಭಾ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ ಸದಸ್ಯ ರತ್ನಾಕರ ನಾಯ್ಕ ದೀಪ ಬೆಳಗಿಸುವ ಮೂಲಕ ಉದ್ಘಾಟಿದಸಿದ್ದರು.ಈ ವೇಳೆ ಮಾತನಾಡಿದ ಅವರು ಕ್ರೀಡಾಪಟುಗಳಿಗೆ ಉತ್ಸಾಹ ತುಂಬುವ ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಕೋರಿದರು.

RELATED ARTICLES  ವಿವೇಕನಗರ ವಿಕಾಸ ಸಂಘ"ದ ಕಾರ್ಯಕಾರೀ ಸಮೀತಿ ಸದಸ್ಯರ ಆಯ್ಕೆ.

ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಯುವ ಕಾಂಗ್ರೆಸ್ ಮುಖಂಡ ರವಿ ಶೆಟ್ಟಿ ಮಾತನಾಡಿ ಕರೋನದಿಂದ ಚೇತರಿಸಿಕೊಳ್ಳುತ್ತಿರುವ  ಇ ಸಂದರ್ಭದಲ್ಲಿ ಕಾರ್ಯಕ್ರಮಗಳು ನಡೆಸುವುದು ತಂಬಾ ಕಷ್ಟ. ಆದರೂ ಇತಂಹ ದೊಡ್ಡ ಕಾರ್ಯಕ್ರಮ ಮಾಡಿರುವುದು ಶ್ಲಾಘನೀಯ ಅಲ್ಲದೆ ನಮ್ಮ ದೇಶಿ ಕ್ರೀಡೆಯನ್ನು ಉಳಿಸುವುದಕ್ಕೆ ಇತಂಹ ಕ್ರೀಡ  ಕಾರ್ಯಕ್ರಮ ಪೂರಕವಾಗುತ್ತದೆ ಎಂದರು.

RELATED ARTICLES  ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವದಲ್ಲಿ ಸಾಂಸ್ಕೃತಿಕ ಕಲರವ.


ಈ ಕಾರ್ಯಕ್ರಮದಲ್ಲಿ ಸಾಧಕರನ್ನು ಗುರುತಿಸಿ ಗೌರವಿಸುವ ಕಾರ್ಯ ಕೂಡ ನಡೆಯಿತು..ಮಿರ್ಜಾನ ಭಾಗದ ನಿವೃತ್ತ ಸೈನಿಕರಾದ  ಮಂಜುನಾಥ ಎಮ್ ನಾಯ್ಕ ಮತ್ತು ಗಿರೀಶ್ ನಾಯ್ಕ  ಕ್ರೀಡಾಪಟು ಕಾರ್ತಿಕ ಮುಖ್ಯಮಂತ್ರಿಯವರಿಂದ ಪೋಲಿಸ್ ಇಲಾಖೆಯಲ್ಲಿ ಚಿನ್ನದ ಪದಕ ಪಡೆದುರುವ ಲೊಕೇಶ ಎ ಅವರಿಗೆ ಸನ್ಮಾನ ಮಾಡಲಾಯಿತು.