ಅಂಕೋಲಾ : ತಾಲೂಕಿನ ಬ್ರಹ್ಮೂರಿನ ನೆರೆಯ ಊರಾದ ನಾಗೂರಿನ ಕೆದಗೆಪಾಲ್ ನಲ್ಲಿ ಮರಾಠಿ ಸಮಾಜದವರಿಂದ ಶ್ರೀ ಗಂಗಾಧರ ಭಟ್ಟ ಬ್ರಹ್ಮೂರು ಇವರಿಗೆ ಯಕ್ಷಗುರು ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. 1970 ರ ಸಮಯದಲ್ಲಿ ಮೂಲಭೂತ ಸೌಕರ್ಯಗಳಾದ ವಿದ್ಯುತ್, ಧ್ವನಿವರ್ಧಕ, ಸಮರ್ಪಕ ರಸ್ತೆ, ವಾಹನ ಯಾವ ಸೌಲಭ್ಯವಿಲ್ಲದ ಕಾಲದಲ್ಲಿಯೂ ಯಾವ ಪ್ರತಿಫಲಾಪೇಕ್ಷೆ ಇಲ್ಲದೇ ಬ್ರಹ್ಮೂರಿನ ಸುತ್ತಮುತ್ತಲಿನ ಯಾಣ, ಯಲವಳ್ಳಿ , ಅಗ್ರಹಾರ, ಮೊರಬ, ಬೇಣದಹಳ್ಳಿ, ವಾಡಗಾರು, ಕಬಗಾಲು, ಮೊಳ್ಳಳ್ಳಿ, ಗುಡ್ಡೇನೇವಳಸೆ, ಬಯಲು ನೆವಳಸೆ, ನಾಗೂರು ಹೀಗೆ 15 ಕ್ಕೂ ಹೆಚ್ಚಿನ ಹಳ್ಳಿಗೆ ಕಾಲ್ನಡಿಗೆಯಲ್ಲಿಯೇ 10 ರಿಂದ 15 ಕಿ.ಮೀ.ಸಾಗಿ ಯಕ್ಷಗಾನಕ್ಕೆ ಕಲಾ ತಪಸ್ವಿಗಳಾಗಿ ಸೇವೆ ಸಲ್ಲಿಸಿದ ಪುಣ್ಯತಮ ಕೊಡುಗೆ ಇವರದ್ದಾಗಿದೆ.

RELATED ARTICLES  ರೈತರ ಗಮನಸೆಳೆಯುತ್ತಿದೆ ಜಲಕೃಷಿ (ಹೈಡ್ರೋಫೋನಿಕ್ಸ್) ತಂತ್ರಜ್ಞಾನ.

ಕೆಲ ಸಂದರ್ಭದಲ್ಲಿ ಒಂದೇ ಪ್ರಸಂಗದಲ್ಲಿ ಭಾಗವತರಾಗಿಯೂ , ಮದ್ದಳೆಗಾರನಾಗಿಯೂ ಮತ್ತು ಪಾತ್ರಧಾರಿಯೂ ಆಗಿ ಪ್ರಸಂಗದಲ್ಲಾಗುವ ಕೊರತೆಯನ್ನು ನೀಗಿಸುತ್ತಿದ್ದರೆಂದರೆ ಅವರ ಬದ್ಧತೆ,ಶೃದ್ಧೆ, ಸಮರ್ಪಣೆಗೆ ಹಿಡಿದ ಕೈಗನ್ನಡಿಯಾಗಿದೆ.

   "Practice makes  man perfect" ಎಂಬಂತೆ ಶಾಸ್ತ್ರೀಯ ರೀತಿಯ ಯಕ್ಷಗಾನದ ತರಬೇತಿ ಪಡೆಯದಿದ್ದರೂ ಯಕ್ಷಗಾನವನ್ನು ವೀಕ್ಷಿಸಿ ಸ್ವಂತ ಶ್ರಮದಿಂದ  ಕಲೆಯನ್ನು  ಕರಗತ ಮಾಡಿಕೊಂಡು ಕಡು ಬಡತನದಲ್ಲಿಯೂ ಆರ್ಥಿಕ ಮುಗ್ಗಟ್ಟಿನ ಕಾಲದಲ್ಲಿಯೂ  ಈ ಕ್ಷೇತ್ರಕ್ಕೆ ಕಾಲಿಟ್ಟ ಪರಿ ವಿಶೇಷ.

ಪ್ರಚಾರವನ್ನು ಎಂದೂ ಬಯಸದವರಲ್ಲ. ಆದರೆ ಇಂದು ಪ್ರಚಾರವೇ ಅವರನ್ನು ಬಯಸಿದೆ. ಏಕೆಂದರೆ ತಾನು ಅರ್ಥ ಮಾಡಿಕೊಂಡು ಕಲಿತ ಯಕ್ಷಗಾನ ವಿದ್ಯೆಯನ್ನು ಸುಮಾರು 250ಕ್ಕೂ ಹೆಚ್ಚಿನ ಜನರಿಗೆ, ವಿಶೇಷವಾಗಿ ಹಿಂದುಳಿದ ಮರಾಠಿ ಸಮುದಾಯದವರಿಗೆ ಹಣದ ಫಲಾಪೇಕ್ಷೆ ಇಲ್ಲದೇ ತಿಳಿದಷ್ಟು ಕಲಿಸಿ ಯಕ್ಷಗಾನ ಉಳಿಸಿ ಬೆಳೆಸಿದ ಇವರಿಗೆ ಈ ಸನ್ಮಾನವು ಅವರ ಶ್ರಮಕ್ಕೆ ಸಂದ ಗೌರವ ಎನ್ನಬಹುದು.

RELATED ARTICLES  ಅಕ್ರಮವಾಗಿ ಇಟ್ಟಿದ್ದ ನಾಡ ಬಂದೂಕನ್ನು ವಶಪಡಿಸಿಕೊಂಡ ಪೊಲೀಸರು…!

ಇವರ ಸ್ವರ, ಕಂಠ ಎಷ್ಟು ಶುಶ್ರಾವ್ಯವಾಗಿತ್ತೆಂದರೆ ಯಕ್ಷಗಾನದ ಪ್ರಸಿದ್ಧ ಮೇಳಗಳಿಂದ ಮತ್ತು ಪ್ರಸಿದ್ಧ ಹಿಮ್ಮೇಳ ಕಲಾವಿದರಿಂದ ಮೇಳಕ್ಕೆ ಬನ್ನಿ ಎಂಬ ಪತ್ರ ಕೂಡ ಬಂದಿದ್ದು ಇದೆಯಂತೆ. ಒಟ್ಟಿನಲ್ಲಿ ಹಿಂದುಳಿದ ಬ್ರಹ್ಮೂರಿನಂತಹ ಅಡವಿ ಪ್ರಧಾನ ಗ್ರಾಮದಲ್ಲಿ ಇಂದಿಗೂ ಯಕ್ಷಗಾನದ ಕಂಪು ಸೂಸುತ್ತಿದೆ ಎಂದರೆ ಇಂತಹ ಕೆಲ ಪ್ರಾಮಾಣಿಕ ಕಲಾವಿದರಿಂದ.