ಕುಮಟಾ : ಕಳೆದ ಐದು ವರ್ಷಗಳಿಂದ ಹಲವು ಸಾಮಾಜಿಕ ಸೇವಾ ಕಾರ್ಯಗಳನ್ನು,ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅನುಕರಣೀಯ ಸಾಮಾಜಿಕ ಕಾರ್ಯಚಟುವಟಿಕೆಗಳ ಮೂಲಕ ಜನಮನಗೆದ್ದು ಇಲಾಖೆಯಲ್ಲಿ ಅಧಿಕೃತವಾಗಿ ನೊಂದಾಯಿಸಿಕೊಂಡ “ವಿವೇಕನಗರ ವಿಕಾಸ ಸಂಘ”ದ ವಾರ್ಷಿಕ ಸರ್ವಸಾಧಾರಣ ಸಭೆಯು ಇತ್ತೀಚೆಗೆ ಇಲ್ಲಿನ ‘ಶಾರದಾನಿಲಯ’ ಸರಕಾರೀ ಪೂರ್ಣಪ್ರಾಥಮಿಕ ಶಾಲಾ ಆವಾರದಲ್ಲಿ ಜರುಗಿತು.
ಈ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಸೇರಿದ ಸದಸ್ಯರು ಸಂಘದ ನೊಂದಾಯಿತ ಬೈಲಾ ಪ್ರಕಾರ ಕಾರ್ಯಕಾರೀ ಸಮೀತಿ ಸದಸ್ಯರನ್ನು ಆಯ್ಕೆಮಾಡಿದರು.
ಕಾರ್ಯಕಾರೀ ಸಮೀತಿಯ ಸದಸ್ಯರ ಸಭೆಯಲ್ಲಿ ಮುಂದಿನ ಅವಧಿಯ ಬಗ್ಗೆ ಸಂಘದ ಅಧ್ಯಕ್ಷರಾಗಿ ಡಾ.ಎಮ್.ಆರ್.ನಾಯಕ, ಉಪಾಧ್ಯಕ್ಷರಾಗಿ ಎಸ್.ಆಯ್.ನಾಯ್ಕ , ಕಾರ್ಯದರ್ಶಿಯಾಗಿ ಡಾ.ಡಿ.ಡಿ.ಭಟ್ಟ ಮತ್ತು ಖಜಾಂಚಿಯಾಗಿ ವಿ.ವಿ.ಹೊಸಕಟ್ಟಾ ರವರು ಪುನರಾಯ್ಕೆಗೊಂಡರು. ನೂತನ ಸದಸ್ಯ ಸೀತಾರಾಮ ಜಿ.ಗುನಗಾ ಅವರು ಸಹಕಾರ್ಯದರ್ಶಿಯಾಗಿ ಆಯ್ಕೆಗೊಂಡರು.
ಸಂಘದ ಕಾರ್ಯಕಾರೀ ಸಮೀತಿಯ ಸದಸ್ಯರುಗಳಾಗಿ
ಅರುಣ ಎನ್.ಹೆಗಡೆ,ಜಯದೇವ ಬಳಗಂಡಿ,
ಆರ್.ಎನ್.ಪಟಗಾರ,ಕೆ.ಎಸ್.ಭಟ್ಟ,ಸಂಜಯ ಪಂಡಿತ,ಕುಮಾರ ಕವರಿ, ತಿಮ್ಮಪ್ಪ ಮುಕ್ರಿ, ಡಾ.ಎನ್.ಡಿ.ನಾಯಕ, ಕಾಮೇಶ್ವರ ಆರ್.ಭಟ್ಟ, ಮಹಾಬಲೇಶ್ವರ ಎನ್.ರೇವಣಕರ, ಮೋಹನ ಜಿ.ಗುನಗಾ ಮತ್ತು ಜನಾರ್ಧನ ಜೆ.ನಾಯ್ಕ ಅವರು ಆಯ್ಕೆಯಾದರು.
ಈವರೆಗೂ ಕೈಕೊಂಡು ಬಂದಿರುವ ಸೇವಾ ಕಾರ್ಯಗಳ ಜೊತೆಗೆ ಮುಂಬರುವ ದಿನಗಳಲ್ಲಿ ಸಂಘವು ಹಮ್ಮಿಕೊಳ್ಳಬಹುದಾದ ಇನ್ನಿತರ ಉಪಯುಕ್ತ ಕಾರ್ಯಚಟುವಟಿಕೆಗಳ ಕುರಿತು ಕಾರ್ಯಕಾರೀ ಸಮೀತಿಯಲ್ಲಿ ಚರ್ಚಿಸಿ ಸೂಕ್ತ ಕ್ರಿಯಾಯೋಜನೆಯೊಂದನ್ನು ರೂಪಿಸಲಾಯಿತು.