ಶಿರಸಿ: ತಾಲೂಕಿನ ಝೂ ಸರ್ಕಲ್ ಬಳಿ ಇಂದು ಬಾವಿಯಲ್ಲಿ ನೀರನ್ನು ಸೇದಲು ಹೋದ ವಯೋವೃದ್ಧೆಯೋರ್ವಳು ಆಕಸ್ಮಿಕವಾಗಿ ಬಾವಿಗೆ ಬಿದ್ದ ಘಟನೆ ಬೆಳಗ್ಗೆ ನಡೆದಿದೆ. ಘಟನೆಯಿಂದಾಗಿ ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಬರ್ತಾ ಫಾನ್ಸಿಸ್ ಫನಾರ್ಂಡೀಸ್ ಎಂಬಾಕೆ ಬಾವಿಗೆ ಬಿದ್ದ ವೃದ್ದೆಯಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ವಿಷಯ ತಿಳಿದು ತಕ್ಷಣವೇ ಸ್ಥಳಕ್ಕೆ ಆಗಮಿಸಿದ ನಗರಠಾಣೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ಆಕೆಯನ್ನು ಮೇಲಕ್ಕೆತ್ತಿ ಬದುಕಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಾವಿಗೆ ಇಳಿದು ವೃದ್ಧೆಯನ್ನು ಬದುಕಿಸಿದ ದಿನೇಶ ಪೂಜಾರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.