ಕುಮಟಾ: ಇಲ್ಲಿನ‌ ದೀವಗಿ ಬ್ರಿಡ್ಜ್ ಬಳಿಯ ಅಘನಾಶಿನಿ ನದಿಯಲ್ಲಿ ಮರಳು ತೆಗೆಯುವ ದೋಣಿಯೊಂದು ಮುಳುಗಿದ್ದು, ಅದರಲ್ಲಿದ್ದ ಕೃಷ್ಣ ಗಜಾನನ ದೇಶಭಂಡಾರಿ ಎಂಬಾತ ಕೂಡ ನದಿಯ ಪಾಲಾಗಿದ್ದಾನೆ. ಪ್ರತಿ ನಿತ್ಯ ಇದೇ ಕಾಯಕದಲ್ಲಿ ತೊಡಗುತ್ತಿದ್ದ ಕೆಲವರು ಎಂದಿನಂತೆ ಮರಳು ತೆಗೆಯಲು ದೋಣಿಯಲ್ಲಿ ತೆರಳಿದ್ದರು ಎನ್ನಲಾಗಿದೆ. ದೋಣಿ ಮುಳುಗಿದ ಪರಿಣಾಮ ಅದರಲ್ಲಿದ್ದ ಕೃಷ್ಣ ಗಜಾನನ ದೇಶಭಂಡಾರಿ ನಾಪತ್ತೆಯಾಗಿದ್ದಾನೆ.

RELATED ARTICLES  ಉತ್ತರ ಕನ್ನಡದ ಕೊರೋನಾ ಸೋಂಕಿತ 18 ಮಂದಿ ಗುಣಮುಖ : ಇಂದು ಇಬ್ಬರಿಗೆ ಸೋಂಕು ದೃಢ

IMG 20170919 WA0008

ಯುವಕನ ದೇಹಕ್ಕಾಗಿ ಹುಡುಕಾಟ ನಡೆದಿದ್ದು, ತಹಶಿಲ್ದಾರ ಮೇಘರಾಜ ನಾಯ್ಕ, ಅಗ್ನಿಶಾಮಕ ದಳಸದ ಸಿಬ್ಬಂದಿ, ಪೊಲೀಸರು, ಸ್ಥಳೀಯ ಈಜುಗಾರರು ಸ್ಥಳಕ್ಕೆ ಧಾವಿಸಿದ್ದಾರೆ.

RELATED ARTICLES  ಕುಮಟಾ : ಬಾಡದ ಜಾತ್ರೆ - ರಥ ಎಳೆದ ಭಕ್ತಗಣ.