ಬೆಂಗಳೂರು : ತನ್ನ ಮಾತಿನ ಮೂಲಕವೇ ಕೇಳುಗರ ಗಮನ ಸೆಳೆದಂಥಾ ರೇಡಿಯೋ ಜಾಕಿ ರಚನಾ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ರೇಡಿಯೋ ಸಿಟಿಯಲ್ಲಿ ಆರ್. ಜೆ. ಆಗಿದ್ದ ರಚನಾ ಅನೇಕ ಕಾರ್ಯಕ್ರಮಗಳನ್ನ ನಿರೂಪಣೆ ಕೂಡ ಮಾಡಿದ್ದು ಜೊತೆಗೆ ಸಿಂಪಲ್ಲಾಗೊಂದ್ ಲವ್ ಸ್ಟೋರಿ ಚಿತ್ರದಲ್ಲಿ ನಟನೆ ಕೂಡ ಮಾಡಿದ್ದಾರೆ.
ಜೆ.ಪಿ .ನಗರದ ಪ್ಲಾಟ್ ನಲ್ಲಿ ವಾಸ ಮಾಡುತ್ತಿದ್ದ ರಚನಾಗೆ ಎದೆ ನೋವು ಕಾಣಿಸಿದ್ದು, ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗಲೇ ನಿಧನರಾಗಿದ್ದಾರೆ. ಕಳೆದ ಮೂರು ವರ್ಷಗಳಿಂದ ಅರ್. ಜೆ. ಕೆಲಸ ಬಿಟ್ಟಿದ್ದ ರಚನಾ ಕಿನ್ನತೆಗೆ ಒಳಗಾಗಿದ್ರಾ ಆನ್ನಿಸುತ್ತೆ. ರಚನಾ ತಂದೆ ತಾಯಿ ಚಾಮರಾಜಪೇಟೆ ಯಲ್ಲಿ ವಾಸ ಮಾಡುತ್ತಿದ್ದು, ಒಬ್ಬಂಟಿಯಾಗಿ ರಚನಾ ವಾಸ ಮಾಡುತ್ತಿದ್ದರಂತೆ. ರಚನಾ ಪಾರ್ಥೀವ ಶರೀರವನ್ನು ಚಾಮರಾಜ ಪೇಟೆ ನಿವಾಸಕ್ಕೆ ಕೊಂಡೊಯ್ಯಲಿದ್ದಾರೆ ಎಂದು ಆತ್ಮೀಯರು ಮೂಲಕ ತಿಳಿದುಬಂದಿದೆ. ಈ ವಿಧಿಯ ಆಟವೇ ಘೋರ. ಪ್ರತಿಭಾವಂತೆ ರಚನಾ ಚಿಕ್ಕ ವಯಸ್ಸಿನಲೇ ಇಹಲೋಕ ತೇಜಿಸಿದ್ದು, ಇಡೀ ಕುಟುಂಬ ದುಖದ ಮಡುವಿನಲ್ಲಿದೆ. ಅತ್ಮೀಯರು , ಸ್ನೇಹಿತರು, ರೇಡಿಯೋ ಸಿಬ್ಬಂದಿ ವರ್ಗದವರು ಕoಬನಿ ಮಿಡಿದಿದ್ದಾರೆ.
ಸುಮಾರು 39 ವರ್ಷದ ಆರ್.ಜೆ ರಚನಾ ಅಸುನಿಗಿದ್ದಾರೆ. ರೆಡಿಯೋ ಮಿರ್ಚಿಯಲ್ಲಿ ಹಲವಾರು ವರ್ಷ ರೆಡಿಯೋ ಜಾಕಿಯಾಗಿ ರಚನಾ ಕೆಲಸ ಮಾಡಿದ್ದರು. ತಮ್ಮ ಮಾತಿನ ಮೂಲಕವೇ ಜನರ ಮನಸ್ಸು ಗೆದ್ದಿದ್ದ ಮುದ್ದು ಮುಖದ ಚೆಲವು ರಚನಾ. ಸಖತ್ ಫಿಟ್ ಅಂಡ್ ಫೈನ್ಆಗಿದ್ದ ರಚನಾಗೆ ಹಾರ್ಟ್ ಅಟ್ಯಾಕ್ ಆಗಿದೆ.