ಭಟ್ಕಳ : ನೀರಿನಲ್ಲಿ ಪುರುಷನ ಮೃತದೇಹವೊಂದು ತೇಲುತ್ತಿರುವ ಸ್ಥಿತಿಯಲ್ಲಿ ಮಂಗಳವಾರ ಪತ್ತೆಯಾಗಿದ್ದು, ಅಪರಿಚಿತ ವ್ಯಕ್ತಿ ಯಾರೆಂಬ ಬಗ್ಗೆ ತನಿಖೆ ಪ್ರಾರಂಭಗೊಂಡಿರುವ ಘಟನೆ ತಾಲೂಕಿನ ಮುರುಡೇಶ್ವರದ ಸನಿಹ ಇಲ್ಲಿನ ನೇತ್ರಾಣಿ ದ್ವೀಪದ ಸಮೀಪದಲ್ಲಿ ನಡೆದಿದೆ. ಮೃತ ದೇಹದ ಕೈ ಕಾಲು ಹಾಗೂ ತಲೆ ಭಾಗ ಮೀನುಗಳು ಸಂಪೂರ್ಣವಾಗಿ ತಿಂದು ಹಾಕಿವೆ. ಘಟನೆಯಿಂದಾಗಿ ಕೆಲ ಕಾಲ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ವ್ಯಕ್ತಿಯ ಶವವನ್ನು ಕಂಡು ಜನರು ಕಂಗಾಲಾಗಿದ್ದರು ಎಂದು ಸ್ಥಳೀಯ ಮಾಹಿತಿ ಲಭ್ಯವಾಗಿದೆ.

RELATED ARTICLES  ಚುನಾವಣೆ ಮೊದಲು ಭರವಸೆ : ಈಗ ಗ್ರಾಮಸ್ಥರ ಗೋಳು ಕೇಳೋರೆ ಇಲ್ಲ: ಕುಮಟಾದ ಕೆಲ ಗ್ರಾಮದ ಕಥೆ ವ್ಯಥೆ..!

ಅಪರಿಚಿಯ ಮೃತ ದೇಹ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮೃತವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ಮೃತ ವ್ಯಕ್ತಿಯು ಕೆಲ ದಿನಗಳ ಹಿಂದೆ ಸಮುದ್ರಕ್ಕೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿರಬಹುದಾಗಿ ಅಂದಾಜಿಸಲಾಗಿದೆ. ಪೊಲೀಸ್ ತನಿಖೆಯ ನಂತರದಲ್ಲಿಯೇ ಪೂರ್ಣ ಮಾಹಿತಿ ತಿಳಿದು ಬರಬೇಕಿದೆ.

RELATED ARTICLES  ಜಿಲ್ಲಾ ಪಂಚಾಯತಿಯ 2020- 21ನೇ ಸಾಲಿನ ಬಜೆಟ್ ಮಂಡನೆ