ಮುಂಡಗೋಡ: ತಾಲ್ಲೂಕಿನ ಕಾಲೇಜೊಂದರಲ್ಲಿ ಪಿಯುಸಿ ಓದುತ್ತಿದ್ದ ಯುವತಿ ಶವವಾಗಿ ತಾಲೂಕಿನ ಚಾಚಣಕಿ ಜಲಾಶಯದಲ್ಲಿ ಪತ್ತೆಯಾಗಿದ್ದಾಳೆ ಎನ್ನಲಾಗಿದ್ದು. ಇದೇ ಸ್ಥಳದಲ್ಲಿ ಪುರುಷರು ಧರಿಸುವ ಪಾದರಕ್ಷೆ ಪತ್ತೆಯಾಗಿದ್ದು, ಯುವಕನೂ ಸ್ಥಳದಲ್ಲಿದ್ದರಬಹುದು ಎನ್ನುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಯುವತಿಯು ಕಲಕೇರಿ ಗ್ರಾಮದ ನಿವಾಸಿ ಎಂದು ತಿಳಿದು ಬಂದಿದೆ. ಘಟನೆ ನಡೆದ ಸ್ಥಳದಲ್ಲಿ ಯುವಕ ಮತ್ತು ಯುವತಿ ಇಬ್ಬರು ಇದ್ದರೇ, ಅವರು ಜಲಾಶಯದ ಬಳಿ ಏಕೆ ಬಂದಿದ್ದರು ಎನ್ನುವುದು ಎನ್ನುವುದು ಪೊಲೀಸರ ತನಿಖೆಯಿಂದ ತಿಳಿದು ಬರಬೇಕಿದೆ.
ಯುವಕನು ಬಿ.ಎ. ವಿದ್ಯಾರ್ಥಿಯಾಗಿದ್ದು, ಹನಮಾಪುರ ಗ್ರಾಮದ ನಿವಾಸಿ ಎನ್ನಲಾಗಿದೆ. ಈ ಇಬ್ಬರೂ ಪ್ರೌಢಶಾಲೆಗೆ ಹೋಗುವಾಗಲೇ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಆದರೆ, ಹುಡಿಯ ಮನೆಯಲ್ಲಿ ಇವರ ಪ್ರೇಮಕ್ಕೆ ವಿರೋಧವಿತ್ತು ಎನ್ನಲಾಗಿದ್ದು, ಇದನ್ನೇ ಮನಸ್ಸಿಗೆ ಹಚ್ಚಿಕೊಂಡು ಸಾವಿಗೆ ಶರಣಾಗಿರುವ ಸಾಧ್ಯತೆಯಿದೆ ಎನ್ನಲಾಗಿದೆ. ಪೊಲೀಸ್ ತನಿಖೆಯಿಂದ ಪೂರ್ಣ ಮಾಹಿತಿ ತಿಳಿದುಬರಬೇಕಿದೆ.