ಕಾರವಾರ: ತಾಲೂಕಿನ ಜಿಲ್ಲಾ ಆಸ್ಪತ್ರೆಯಲ್ಲಿ ಡಾಟಾ ಎಂಟ್ರಿ ಆಪರೇಟರ್ ವೃತ್ತಿಯಲ್ಲಿದ್ದ ಸಚಿನ್ ಕಾಣಕೋಣಕರ ಎಂಬ 26 ವರ್ಷದ ಯುವಕ ಕಾಣೆಯಾಗಿದ್ದಾನೆ. ಈತ ಮಖೇರಿ ಸಾಸನವಾಡಾದ ನಿವಾಸಿಯಾಗಿದ್ದು, ಫೆ.10ರಂದು ಬೆಳಿಗ್ಗೆ 8:45ಕ್ಕೆ ಕೆಲಸಕ್ಕೆಂದು ಹೋದವನು ಆಸ್ಪತ್ರೆಗೂ ಹೋಗದೇ ಮನೆಗೂ ಹೋಗದೇ ಮೊಬೈಲ್ ಬಂದ್ ಮಾಡಿಕೊಂಡು ಎಲ್ಲಿಯೋ ಹೋಗಿದ್ದಾನೆ ಎಂದು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೋಲು ಮುಖ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು, ಕಪ್ಪು ಕೂದಲು, ಸುಮಾರು 5 ಅಡಿ, 4 ಅಂಗುಲ ಎತ್ತರವಿದ್ದು, ಕೊಂಕಣಿ, ಕನ್ನಡ, ಹಿಂದಿ, ಇಂಗ್ಲೀಷ್ ಮಾತನಾಡುತ್ತಾನೆ. ಮನೆಯಿಂದ ಹೋಗುವಾಗ ನೀಲಿ ಬಣ್ಣದ ಚೆಕ್ಟ್ ಶರ್ಟ್, ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿ, ತಿಳಿ ನೀಲಿ ಬಣ್ಣದ ಏರ್ ಬ್ಯಾಗ್ ತೆಗೆದುಕೊಂಡು ಹೋಗಿದ್ದಾನೆ. ಈ ವ್ಯಕ್ತಿಯು ತಮ್ಮ ಠಾಣೆ ವ್ಯಾಪ್ತಿಯಲ್ಲಿ ಪತ್ತೆಯಾಗಿದ್ದಲ್ಲಿ ಅಥವಾ ಯಾವುದೇ ಮಾಹಿತಿ ಲಭಿಸಿದ್ದಲ್ಲಿ ಕಾರವಾರ ಗ್ರಾಮೀಣ ಪೊಲೀಸ್ ಠಾಣಾ ದೂರವಾಣಿ ಸಂಖ್ಯೆ: 08382- 222 443, ಮೊಬೈಲ್ ಸಂಖ್ಯೆ: 9480805262 ಹಾಗೂ ಜಿಲ್ಲಾ ಪೊಲೀಸ್ ನಿಯಂತ್ರಣ ಕೊಠಡಿ ದೂರವಾಣಿ ಸಂಖ್ಯೆ: 08382- 226 550ಗೆ ತಿಳಿಸಲು ಕಾರವಾರ ಗ್ರಾಮೀಣ ಪೊಲೀಸ್ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.