ಶಿರಸಿ : ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ಬಾವಿಗೆ ಹಾರಿದ್ದಳು ಎನ್ನಲಾದ ಮಹಿಳೆಯೊಬ್ಬಳನ್ನು ಬಾವಿಯಿಂದ ಹೊರತೆಗದು ಪ್ರಾಣ ಉಳಿಸಿದ ಘಟನೆ ವರದಿಯಾಗಿದೆ. ಅನಾರೋಗ್ಯ ಮತ್ತು ಮಾನಸಿಕವಾಗಿ ನೊಂದ ವೃದ್ಧೆಯೋರ್ವಳು ಇಲ್ಲಿಯ ಪಶುಸಂಗೋಪನಾ ಇಲಾಖೆಗೆ ಸೇರಿದ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

RELATED ARTICLES  ಹಿಂದೂ ಹೋರಾಟಗಾರ ಶಂಕರ ನಾಯ್ಕ ಬಿಡುಗಡೆ: ಅಭಿಮಾನಿಗಳಲ್ಲಿ ಸಂತಸ

ಮಹಿಳೆ ಬಾವಿಗೆ ಹಾರಿದ್ದನ್ನು ಗಮನಿಸಿದ ಆಸ್ಪತ್ರೆ ಸಿಬ್ಬಂದಿ ಮತ್ತು ರಸ್ತೆಯಲ್ಲಿ ಸಾಗುತ್ತಿದ್ದ ಸಂಗೀತಾ ಮೊಬೈಲ್ ಶಾಪ್ ಸಿಬ್ಬಂದಿ ಸಚಿನ ಶಿವಕುಮಾರ ಮತ್ತು ನಿತಿನ ಸಮಯಪ್ರಜ್ಞೆಯಿಂದ ವೃದ್ಧೆ ಬರ್ತಾ ಫರ್ನಾಂಡಿಸ್ ಬದುಕಿದ್ದಾರೆ. ಗಣೇಶ ನಗರದ ದಿನೇಶ ಎಂಬುವವರು ಸಾರ್ವಜನಿಕರ ಸಹಕಾರದಿಂದ ಬಾವಿಗಿಳಿದು ಮಹಿಳೆ ಮೇಲೆತ್ತಲು ಸಹಕರಿಸಿದ್ದಾರೆ ಎನ್ನಲಾಗಿದೆ.

RELATED ARTICLES  ಭಟ್ಕಳ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಹೊಣೆಗಾರಿಕೆ ಸ್ವೀಕಾರ ಎಪ್ರಿಲ್ ೧೨ರಂದು. : ಗಂಗಾಧರ ನಾಯ್ಕ

ನಗರಠಾಣೆ ಪಿಎಸ್‌ಐ, ಸಿಬ್ಬಂದಿ ಮತ್ತು 112 ಸಿಬ್ಬಂದಿ ಈ ಸಂದರ್ಭದಲ್ಲಿದ್ದು ಸಹಕರಿಸಿದರು. ಅಗ್ನಿಶಾಮಕ ಸಿಬ್ಬಂದಿ ಮಹಿಳೆ ರಕ್ಷಣೆಗೆ ನೆರವಾದರು.