ಶಿರಸಿ: ಗುರುವಾರ ನಸುಕಿನ ಜಾವ ಬೆಂಕಿ ನಡೆದ ಬೆಂಕಿ ಅನಾಹುತದಲ್ಲಿ ನಗರದ ನಟರಾಜ ರಸ್ತೆಯಲ್ಲಿರುವ ಎರಡು ಅಂಗಡಿಗಳಿಗೆ ಅಪಾರ ಪ್ರಮಾಣದ ಹಾನಿಯಾಗಿದ್ದು, ಬೆಂಕಿಯ ಕೆನ್ನಾಲಿಗೆಗೆ ಸಿಲುಕಿದ ಗಡಿಗಳಿ ಹೊತ್ತಿ ಉರಿದ ದುರ್ಘಟನೆ ಸಂಭವಿಸಿದೆ. ಅಂಗಡಿಗೆ ಬೆಂಕಿ ತಗುಲಿದ್ದನ್ನು ಗಮನಿಸಿದ ಸ್ಥಳೀಯ ಜನರು ಬೆಂಕಿ ನಂದಿಸಲು ಹರ ಸಾಹಸ ಪಟ್ಟರು. ಘಟನೆಯಿಂದಾಗಿ ಕೆಲ ಹೊತ್ತು ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು ಎನ್ನಲಾಗಿದೆ.

RELATED ARTICLES  ಕೋವಿಡ್ ಹೆಚ್ಚುತ್ತಿದ್ದರೂ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರೇ ಹೆಚ್ಚು.

ಇಲ್ಲಿಯ ಪರ್ಲ್ ಬ್ಯೂಟಿಕ್ ಸ್ಟೋರ್ ಹಾಗು ಮೇಘನಾ ಟೇಲರ್ ಅಂಗಡಿಗಳು ಬೆಂಕಿಯ ಕೆನ್ನಾಲೆಗೆ ತುತ್ತಾಗಿ ಭಸ್ಮವಾಗಿವೆ. ವಿದ್ಯುತ್ ಶಾರ್ಟ್ ಸರ್ಕಿಟ್ ನಿಂದ ಬೆಂಕಿ ಹಬ್ಬಿದೆ ಎಂದು ಅಂದಾಜಿಸಲಾಗಿದ್ದು, ಅಗ್ನಿಶಾಮಕ ದಳ ಕಾರ್ಯಾಚರಣೆ ನಡೆಸಿ, ಹೆಚ್ಚಿನ ಅನಾಹುತವನ್ನು ತಡೆದಿದೆ. ಸುಮಾರು ಎಂಟು ಲಕ್ಷಕ್ಕೂ ಅಧಿಕ ಹಾನಿಯಾಗಿರುವ ಸಾಧ್ಯತೆಯನ್ನು ಅಂದಾಜಿಸಲಾಗಿದೆ. ಒಂದರ ಪಕ್ಕ ಒಂದು ಅಂಗಡಿಯ ಸಾಲುಗಳಿದ್ದು, ಸ್ವಲ್ಪ ಸಮಯ ತಗುಲಿದರೆ ಇತರ ಅಂಗಡಿಗಳಿಗೂ ಹಬ್ಬುವ ಸಾಧ್ಯತೆ ಇತ್ತು ಎನ್ನಲಾಗಿದೆ.

RELATED ARTICLES  ಉಚಿತ ಬಸ್ ಪಾಸ್ ನೀಡುವಂತೆ ಶಾಸಕ ದಿನಕರ‌ ಶೆಟ್ಟಿಯವರಿಗೆ ಎಬಿವಿಪಿ ಮನವಿ.