ಕೈವ್: ಉಕ್ರೇನ್ ಹಾಗೂ ರಷ್ಯಾ ನಡುವಿನ ಸಮರ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಉಕ್ರೇನ್ ಮೇಲೆ ರಷ್ಯಾ ನಡೆಸಿರುವ ದಾಳಿಯಲ್ಲಿ 7 ಜನರು ಸಾವನ್ನಪ್ಪಿದ್ದಾರೆ ಎಂದು ಉಕ್ರೇನ್ ಅಧಿಕೃತ ಮಾಹಿತಿ ನೀಡಿದೆ.
ಉಕ್ರೇನ್ ನ ಕೈವ, ಖಾರ್ಕಿವ್, ಒಡೆಸ್ಸಾ, ಮೌರಿಪೋಲ್, ಕ್ರಾಮಟೋರಸ್ಕ್ ಸೇರಿದಂತೆ 6 ನಗರಗಳನ್ನು ರಷ್ಯಾ ಟಾರ್ಗೆಟ್ ಮಾಡಿದ್ದು, ಒಡೆಸ್ಸಾ ವಾಯು ನೆಲೆಯನ್ನು ಛಿದ್ರಛಿದ್ರಗೊಳಿಸಿದೆ.
ಇನ್ನೊಂದೆಡೆ ಖಾರ್ಕಿವ್ ನಗರದೊಳಗೆ ನುಗ್ಗಿರುವ ರಷ್ಯಾ ಮಿಲಿಟರಿ ಪಡೆ, ನಗರದಾದ್ಯಂತ ಬೀಡು ಬೀಟ್ಟಿವೆ.
ಈ ನಡುವೆ ಉಕ್ರೇನ್ ನ ಮೂರು ಏರ್ ಪೋರ್ಟ್ ಗಳ ಮೇಲೆ ರಷ್ಯಾ ಖಂಡಾಂತರ ಕ್ಷಿಪಣಿ ದಾಳಿ ನಡೆಸಿದೆ. ರಷ್ಯಾ ನಡೆಸಿರುವ ಶೆಲ್ ದಾಳಿಯಲ್ಲಿ ಉಕ್ರೇನ್ ನ 7 ಜನರು ಸಾವನ್ನಪ್ಪಿದ್ದು, 9ಕ್ಕೂ ಹೆಚ್ಚು ಜನ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಉಕ್ರೇನ್ ತಿಳಿಸಿದೆ.
Source : Web Kannada