ಬೆಂಗಳೂರು: ಶೈಕ್ಷಣಿಕ ವರ್ಷದ ಕೊನೆ ಹಾಗೂ ಪರೀಕ್ಷಾ ವ್ಯವಸ್ಥೆ ಬಗ್ಗೆ ಗೊಂದಲ ಪರಿಹಾರವಾಗಿದ್ದು, ಪ್ರಸಕ್ತ ಶೈಕ್ಷಣಿಕ ವರ್ಷ 2021–22 ಏಪ್ರಿಲ್‌ 9ಕ್ಕೆ ಮುಕ್ತಾಯಗೊಳ್ಳಲಿದ್ದು, ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಏಪ್ರಿಲ್ 10 ರಿಂದ ಮೇ 15ರವರೆಗೆ ಬೇಸಿಗೆ ರಜೆ ನೀಡಲು ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ಧರಿಸಿದೆ. ಅದಲ್ಲದೆ ಮೇ 16ರಿಂದ ಮುಂದಿನ ಶೈಕ್ಷಣಿಕ ವರ್ಷ (2022–23) ಆರಂಭವಾಗಲಿದೆ ಎಂದು ಪ್ರಕಟಣೆ ಮಾಡಿದೆ ಎನ್ನಲಾಗಿದೆ.

ಕೋವಿಡ್‌ ಕಾರಣ 2019–20, 2020–21 ಮತ್ತು 2021–22 ಈ ಮೂರೂ ಶೈಕಣಿಕ ಸಾಲಿನಲ್ಲಿ ಭೌತಿಕ ತರಗತಿಗಳು ನಡೆಯದೆ ವಿದ್ಯಾರ್ಥಿಗಳಿಗೆ ಆಗಿರುವ ಕಲಿಕಾ ಕೊರತೆಯನ್ನು ಸರಿದೂಗಿಸಲು ಮುಂದಿನ ವರ್ಷ ಶೈಕ್ಷಣಿಕ ವರ್ಷದಲ್ಲಿ ‘ಕಲಿಕಾ ಚೇತರಿಕೆ (ಸೇತುಬಂಧ) ಕಾರ್ಯಕ್ರಮ ಆಯೋಜಿಸಲು ಕೂಡಾ ಇಲಾಖೆ ನಿರ್ಧರಿಸಿದೆ. ಈ ಕಾರ್ಯಕ್ರಮ ಮೇ 16ರಿಂದ ಆರಂಭವಾಗಲಿದೆ. ಸಾಮಾನ್ಯವಾಗಿ ಶೈಕ್ಷಣಿಕ ವರ್ಷ ಮೇ 29ರಿಂದ ಆರಂಭವಾಗಿ ಏಪ್ರಿಲ್‌ 10ಕ್ಕೆ ಮುಕ್ತಾಯವಾಗುತ್ತಿತ್ತು.

RELATED ARTICLES  ಚಾಕುವಿನಿಂದ ಇರಿದು ವ್ಯಕ್ತಿಯ ಕೊಲೆ.

ಪ್ರಸಕ್ತ ವರ್ಷ ಏಪ್ರಿಲ್‌ 9ರಂದು ಶೈಕ್ಷಣಿಕ ವರ್ಷ ಕೊನೆಗೊಳ್ಳಲಿರುವುದರಿಂದ ಪ್ರಾಥಮಿಕ ಶಾಲೆಗಳಲ್ಲಿ (1–5, 1–7 ಮತ್ತು 8ನೇ ತರಗತಿ ಇರುವ ಶಾಲೆಗಳು) ಮಾರ್ಚ್‌ 24ರಿಂದ ಏಪ್ರಿಲ್‌ 4ರವರೆಗೆ ವಾರ್ಷಿಕ ಪರೀಕ್ಷೆ ನಡೆಸಿ, ಏ. 9ರಂದು ಫಲಿತಾಂಶ ಪ್ರಕಟಿಸಬೇಕು. 8–9 ತರಗತಿಗಳಿರುವ ಪ್ರೌಢ ಶಾಲೆಗಳಲ್ಲಿ ಮಾರ್ಚ್‌ 21ರಿಂದ ಮಾರ್ಚ್‌26ರವರೆಗೆ ವಿಷಯವಾರು ಪರೀಕ್ಷೆ, ಮಾರ್ಚ್‌29ರಂದು ಭಾಗ–2 ( ದೈಹಿಕ ಶಿಕ್ಷಣ, ಇತರ) ಪರೀಕ್ಷೆ ನಡೆಸಿ, ಏಪ್ರಿಲ್‌ 7ರಂದು ಫಲಿತಾಂಶ ಪ್ರಕಟಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯು ಸೂಚಿಸಿದೆ.

RELATED ARTICLES  ಈ ಮಂದಿರದಲ್ಲಿ ದೇವರ ಮೂರ್ತಿ ಇಲ್ಲ, ಫೋಟೋ ಇಲ್ಲ; ಆದರೆ ಈ ‘ವಿಶಿಷ್ಟ ಶಕ್ತಿ’ಗೆ ಪೂಜೆ ನಡೆಯುತ್ತದೆ!