ಕುಮಟಾ: ತಾಲೂಕಿನ ಧಾರೇಶ್ವರ ಸನಿಹದಲ್ಲಿ ಅಂದರೆ ಗೋರೆ ಕ್ರಾಸ್ ಸನಿಹ ಬೈಕ್ ಮತ್ತು ಟ್ಯಾಂಕರ್ ನಡುವೆ ಅಪಘಾತವಾಗಿದ್ದು, ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ದಲ್ಲಿ ನಡೆದಿದೆ. ಧಾರೇಶ್ವರದ ಗೋಪಾಲ್ ವೆಂಕಟಪ್ಪ ನಾಯ್ಕ ಮೃತವ್ಯಕ್ತಿ ಎಂದು ತಿಳಿದುಬಂದಿದೆ. ಹೊನ್ನಾವರದಿಂದ ಕುಮಟಾ ಕಡೆಗೆ ಡಾಬರ್ ತುಂಬಿದ ಟ್ಯಾಂಕರ್, ಬೈಕ್‌ಗೆ ಹಿಂಬದಿಯಿoದ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

RELATED ARTICLES  ಮನೆ ಹಾಗೂ ಬ್ಯಾಂಕ್ ಕಳ್ಳತನದ ಆರೋಪಿ ಪೊಲೀಸ್ ಬಲೆಗೆ

ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವ್ಯಕ್ತಿ ತಲೆಯ ಮೇಲೆಯೇ ಟ್ಯಾಂಕರ್ ಹರಿದ ಪರಿಣಾಮ ರಕ್ತದ ಮಡುವಿನಲ್ಲಿ ಒದ್ದಾಡಿ ವ್ಯಕ್ತಿ ಸಾವು ಕಂಡ ಬಗ್ಗೆ ಸ್ಥಳೀಯ ಮಾಹಿತಿ ಲಭ್ಯವಾಗಿದೆ. ಘಟನೆಯಿಂದಾಗಿ ಸ್ಥಳದಲ್ಲಿ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು ಎನ್ನಲಾಗಿದೆ.

RELATED ARTICLES  ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯಲ್ಲಿ ಸಂಭ್ರಮದ ಗಣರಾಜ್ಯೋತ್ಸವ