ಭಟ್ಕಳ:ನೇತ್ರಾಣಿ ಸಮುದ್ರದ ಸಮೀಪ ಅಪರಿಚಿತ ವ್ಯಕ್ತಿಯ ಶವ ಕೊಳೆದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತ 35-40 ವರ್ಷ ವಯಸ್ಸಿನ ಪ್ರಾಯದವನಾಗಿರಬಹುದು ಎಂದು ಅಂದಾಜಿಸಲಾಗಿದೆ. ಶವದ ಬಗ್ಗೆ ಮಾಹಿತಿ ಪಡೆದ ಕರಾವಳಿ ಕಾವಲು ಪಡೆ ಪೊಲೀಸರು ಸ್ಥಳಕ್ಕೆ ದಾವಿಸಿ ಶವವನ್ನು ಶಿರಾಲಿಯ ಅಳ್ವೆಕೋಡಿ ದಡಕ್ಕೆ ತಂದು ಮುರುಡೇಶ್ವರ ಪೊಲೀಸರಿಗೆ ಹಸ್ತಾಂತರಿದರು.

RELATED ARTICLES  ಅಂಕೋಲಾದಲ್ಲಿ ಕಳ್ಳರ ಕರಾಮತ್ತು : ಅಂದಾಜು 8.40 ಲಕ್ಷ ಮೌಲ್ಯದ ವಸ್ತುಗಳ ಕಳ್ಳತನ

ಶವದ ಮೇಲಿನ ಬಟ್ಟೆ ಹಾಗೂ ಸೊಂಟದ ಪಟ್ಟಿಗಳ ಆಧಾರದ ಮೇಲೆ ಈತನು ಮೀನುಗಾರನಿರಬಹುದು ಎಂದು ಶಂಕಿಸಲಾಗಿದೆ. ಮುರುಡೇಶ್ವರದ ನಿವಾಸಿ ಸುರೇಶ ಶೆಟ್ಟಿ ಅವರ ಸಹಾಯದೊಂದಿಗೆ ಕೊಳೆತ ಶವವನ್ನು ಭಟ್ಕಳ ಸರಕಾರಿ ಆಸ್ಪತ್ರೆಗೆ ತಂದು ಮರಣೋತ್ತರ ಪರೀಕ್ಷೆ ನಡೆಸಿ ಮುರುಡೇಶ್ವರದಲ್ಲಿ ಅಂತ್ಯ ಸಂಸ್ಕಾರ ನಡೆಸಲಾಯಿತು. ಮುರುಡೇಶ್ವರ ಪಿ.ಎಸ್.ಐ. ಪರಮಾನಂದ ಕೊನ್ನೂರು ತನಿಖೆ ಕೈಗೊಂಡಿದ್ದಾರೆ.

RELATED ARTICLES  ಸರಸ್ವತಿ ವಿದ್ಯಾಕೇಂದ್ರದಲ್ಲಿ “ಶಾಲಾಸಂಸತ್” ಉದ್ಘಾಟನೆ