ನ್ಯೂಸ್ ಡೆಸ್ಕ್ :ಉಕ್ರೇನ್ ಹಾಗೂ ರಷ್ಯಾ ನಡುವಿನ ಸಂಘರ್ಷ ತಾರಕಕ್ಕೆ‌ ಏರಿದ್ದು, ಈ ಮಧ್ಯೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನ ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಹಾಗೂ ಆದಿಜಾಂಭವ ಪ್ರೌಢಶಾಲೆಯ ಅಧ್ಯಕ್ಷರಾಗಿರು ಎಸ್. ಪಕೀರಪ್ಪನವರ ಮಗಳಾದ ಸ್ನೇಹ ಸಣ್ಣಪಕೀರಪ್ಪ ಹೊಸಮುನಿ ಎಂಬ ವೈದ್ಯಕೀಯ ವಿದ್ಯಾರ್ಥಿನಿ ಸಿಲುಕಿದ್ದಾಳೆ ಎಂಬ ಸುದ್ದಿ ಉತ್ತರಕನ್ನಡಿಗರಿಗೆ ಭರ ಸಿಡಿಲಿನಂತೆ ಬಂದೆರಗಿದೆ.

ಉಕ್ರೇನ್ ನ ವಿವಿಧ ಭಾಗದಲ್ಲಿ ಕರ್ನಾಟಕದ 136 ಜನರು ಸಿಲುಕಿರುವ ಮೊದಲ ಹಂತದ ಮಾಹಿತಿ ದೊರೆತಿದ್ದು ಈ ಬಗ್ಗೆ ಪತ್ರಿಕೆಗಳು ವರದಿಮಾಡಿದೆ. ಧಾರವಾಡದಲ್ಲಿ ಪಿ.ಯು.ಸಿ ಮುಗಿಸಿ ನಂತರ ಮೆಡಿಕಲ್ ಓದಲು 2018 ರಲ್ಲಿ ಉಕ್ರೇನ್ ಗೆ ತೆರಳಿದ್ದ ಸ್ನೇಹಾ ಕೂಡಾ ಒಬ್ಬಳು. ನಾಲ್ಕನೇ ವರ್ಷದ ಎಂ.ಬಿ.ಬಿ.ಎಸ್ ಓದುತ್ತಿರುವ ಇವರು ಉಕ್ರೇನ್ ನ ಖಾರ್ಕಿವ್ ನ ರಾಷ್ಟ್ರೀಯ ವೈದ್ಯಕೀಯ ವಿದ್ಯಾನಿಲಯದಲ್ಲಿ ಅಧ್ಯಯನ ಮಾಡುತಿದ್ದಾರೆ.

RELATED ARTICLES  ಅಂಗವಿಕಲರ ಬೇಡಿಕೆಗಳನ್ನು ಈಡೇರಿಸುವಲ್ಲಿ ರಾಜ್ಯ ಸರ್ಕಾರ ಅನ್ಯಾಯ ಮಾಡಿದೆ!

ಸ್ನೇಹ ರವರು ಖಾರ್ಕಿವ್ ನಲ್ಲಿ ತಮ್ಮ ಸಹಪಾಠಿಗಳೊಂದಿಗೆ ಚಿಕ್ಕ ಮನೆ ಮಾಡಿಕೊಂಡು ವೈದ್ಯಕೀಯ ಶಾಸ್ತ್ರವನ್ನು ಅಧ್ಯಯನ ಮಾಡುತಿದ್ದಾರೆ. ಅವರೇ ಹೇಳುವಂತೆ ನಿನ್ನೆ ವರೆಗೂ ತರಗತಿ ನಡೆದಿತ್ತು. ಇಂದು ಖಾರ್ಕಿವ್ ಬಳಿಯ ಸುತ್ತಾಮುತ್ತ ರಷ್ಯ ಸೈನಿಕರು ಸುತ್ತವರೆದಿದ್ದು ಆತಂಕದ ವಾತಾವರಣ ನಿರ್ಮಾಣ ಆಗಿದೆ.ಇಂದು ರಷ್ಯಾ ಸೈನಿಕರಿಂದ ನಿರಂತರ ಷಲ್ ದಾಳಿಯಿಂದ ಭೂಮಿ ಕಂಪಿಸಿದ್ದು ಭಯದಲ್ಲಿ ಇರುವಂತೆ ಆಗಿದೆ. ಹೀಗಾಗಿ ಆನ್ ಲೈನ್ ಕ್ಲಾಸ್ ನಡೆಸಿದ್ದಾರೆ ಎಂದಿದ್ದಾರೆ.  ಭಾರತ ಸರ್ಕಾರ ಮೂರು ವಿಮಾನವನ್ನು ಭಾರತೀಯರನ್ನು ಕರೆತರಲು ವ್ಯವಸ್ಥೆ ಮಾಡಿತ್ತು. ಈ ವಿಮಾನದಲ್ಲಿ ಬರಲು ಟಿಕೇಟ್ ಸಿಗದ ಕಾರಣ ಮುಂದಿನ ತಿಂಗಳ ಎಂಟನೇ ತಾರೀಕಿಗೆ ಟಿಕೇಟ್ ಬುಕ್ ಮಾಡಲಾಗಿದೆ. ಆದರೇ ತಕ್ಷಣದಲ್ಲಿ ಯುದ್ದ ಪ್ರಾರಂಭವಾಗಿದ್ದರಿಂದ ವಿಮಾನ ರದ್ದಾಗಿದೆ.
ಯುದ್ದ ಮುಂದುವರೆದರೆ ಮುಂದಿನ ತಿಂಗಳು ಮುಂಗಡ ಬುಕ್ ಮಾಡಿರುವ ವಿಮಾನ ಸಹ ಬಂದ್ ಆಗುವ ಭಯವನ್ನು ವಿದ್ಯಾರ್ಥಿನಿ ತೋಡಿಕೊಂಡಿದ್ದಾರೆ. ಈ ನಡುವೆ ಪಾಲಕರು ಮುಖ್ಯಮಂತ್ರಿಯವರಿಗೆ ತಮ್ಮ ಮಕ್ಕಳನ್ನು ಸುರಕ್ಷಿತವಾಗಿ ಕರೆತರುವಂತೆ ಕೋರಿಕೊಂಡಿದ್ದಾರೆ.

RELATED ARTICLES  ಕುಮಟಾ- ಹೊನ್ನಾವರ ವಿಧಾನಸಭಾ ಕ್ಷೇತ್ರದ ಕೆಪಿಸಿಸಿ ಸಂಯೋಜಕರಾಗಿ ಯುವ ಮುಖಂಡ ಭಾಸ್ಕರ್ ಪಟಗಾರ