ಪ್ರತಿಷ್ಠಿತ ಇಂಗ್ಲಿಷ್ ಸುದ್ದಿ ಮಾಧ್ಯಮ ಡೆಕ್ಕನ ಹೆರಾಲ್ಡ್ ಪ್ರತಿವರ್ಷ ನೀಡುವ ಚೇಂಜ್ ಮೇಕರ್ಸ್ ಪ್ರಶಸ್ತಿ ಯುವ ಹೋರಾಟಗಾರ ಹಾಗೂ ಪರಿಸರ ಕಾರ್ಯಕರ್ತ ಮಾರುತಿ ಗೌಡ ಅವರಿಗೆ ದೊರೆತಿದೆ. ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಪರಿಸರ ಸಂರಕ್ಷಣೆ ಕುರಿತಾಗಿ ಅಧ್ಯಯನ ಮಾಡುತ್ತಿರುವ ಮಾರುತಿ ಗೌಡ ಈ ಹಿಂದೆ ಅಘನಾಶಿನಿ ಬಳಚು ಸಂಗ್ರಹಕಾರರ ಹಕ್ಕುಗಳ ಹೋರಾಟ, ತಡದಿ ವಾಣಿಜ್ಯ ಬಂದರು, ಅಕ್ರಮ ಚಿಪ್ಪಿ ಗಾಣಿಗರಿಕೆ ವಿರುದ್ಧ ಹೋರಾಟ, ಸಿ ಆರ್ ಜೆಡ್ ಪ್ರದೇಶ ವ್ಯಾಪ್ತಿಯಲ್ಲಿ ಮನೆಗಳ ನಿರ್ಮಾಣಕ್ಕೆ ಪರವಾನಿಗೆ ಕೊಡಿಸಿದ್ದು, ಉಪ್ಪು ನೀರು ನುಗ್ಗುತ್ತಿರುವ ಕೃಷಿ ಭೂಮಿಗಳ ರಕ್ಷಣೆ, ಐ ಆರ್ ಬಿ ಕಾಮಗಾರಿಯಿಂದ ಆದ ಬೆಳೆ ನಾಶಕ್ಕೆ ಪರಿಹಾರ, ಕಾರವಾರ ಹಾಗೂ ಹೊನ್ನಾವರ ವಾಣಿಜ್ಯ ಬಂದರು ಕುರಿತಾಗಿ ಮೀನುಗಾರರಿಗೆ ಸಲಹೆ ಹಾಗೂ ಇನ್ನಿತರ ಸಾಮಾಜಿಕ ಕಾರ್ಯಗಳನ್ನು ಮಾಡಿರುತ್ತಾರೆ.

RELATED ARTICLES  ಕುಮಟಾ : ಟ್ಯಾಂಪೋ ಹಾಗೂ ಕಾರಿನ ನಡುವೆ ಅಪಘಾತ