ಸಿದ್ದಾಪುರ: ಪಟ್ಟಣದ ಮುಖ್ಯ ಬಸ್ ನಿಲ್ದಾಣದಲ್ಲಿ ಕರ್ನಾಟಕ ರಾಜ್ಯ ಸಾರಿಗೆ ನಿಗಮನದ ಪಾರ್ಸ್ಲ್ ಸೇವೆಗಾಗಿ ನಿಗಮ ಆರಮಭಿಸಿದ ‘ನಮ್ಮ ಕಾರ್ಗೋ’ ಘಟಕದ ಉದ್ಘಾಟನೆ ಇತ್ತೀಚೆಗೆ ಇಲ್ಲಿ ನಡೆಯಿತು. ನಮ್ಮ ಕಾರ್ಗೋ ಪಾರ್ಸಲ್ ಸರ್ವಿಸ್ ಘಟಕವನ್ನು ಉದ್ಘಾಟಿಸಿದ ಬಸ್ ನಿಲ್ದಾಣ ನಿಯಂತ್ರಣಾಧಿಕಾರಿ ಆರ್.ಟಿ.ನಾಯ್ಕ ತ್ವರಿತವಾಗಿ ಮತ್ತು ಅತ್ಯಂತ ಕಾಳಜಿಯಿಂದ ಗ್ರಾಹರಿಗೆ ಪಾರ್ಸಲ್ ಸೇವೆ ಒದಗಿಸಲು ನಿಗಮ ‘ನಮ್ಮ ಕಾರ್ಗೋ’ ಸೇವೆಯನ್ನು ಆರಂಭಿಸಿರುವುದರಿಂದ ಬದಲಾವಣೆಗೆ ಹೊಸತನದ ಸ್ಪರ್ಷ ನೀಡಿದಂತಾಗಿದೆ. ಈ ಜನಸ್ನೇಹಿ ಯೋಜನೆ ಗ್ರಾಹಕರಲ್ಲಿ ಭರವಸೆ ತುಂಬಲಿ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ‘ನಮ್ಮ ಕಾರ್ಗೋ’ ಸಿದ್ದಾಪುರ ಘಟಕದ ಉಸ್ತುವಾರಿಗಾಗಿ ನೇಮಕವಾದ ಮೋಹನ ಎಸ್.ನಾಯ್ಕ, ಸ್ಥಳೀಯರಾದ ರವಿ ನಾಯ್ಕ, ಸುರೇಶ ನಾಯ್ಕ, ಸಿಬ್ಬಂದಿಗಳಾದ ರಮೇಶ ನಾಯ್ಕ, ಮಂಜುನಾಥ ನಾಯ್ಕ ಮುಂತಾದವರು ಉಪಸ್ಥಿತರಿದ್ದರು. ತಾಲೂಕಿನ ಗ್ರಾಹಕರು ‘ನಮ್ಮ ಕಾರ್ಗೋ’ ಸೇವೆಗಾಗಿ ಈ ಮೊಬೈಲ್ ಸಂಖ್ಯೆ ಸಂಪರ್ಕಿಸಬಹುದು : ೬೩೬೪೯೨೩೯೮೫