ಯಲ್ಲಾಪುರ: ಬೈಕೊಂದು ಕಾರಿಗೆ ಡಿಕ್ಕಿ ಹೊಡೆದು ಇಬ್ಬರು ಗಾಯಗೊಂಡ ಘಟನೆ ಹಳಿಯಾಳ ರಸ್ತೆಯಲ್ಲಿ ತಾಲೂಕಿನ ಕೃಷ್ಣಗದ್ದೆ ಕ್ರಾಸ್ ಬಳಿ ನಡೆದಿದೆ. ಬೈಕ್ ಸವಾರರಾದ ಯಲ್ಲಾಪುರದ ಗಣಪತಿಗಲ್ಲಿಯ ಜಯಕುಮಾರ ಗಣೇಶ ಪಿಳ್ಳೆ ಹಾಗೂ ನೂತನನಗರದ ಇಬ್ರಾಹಿಂ ರಫೀಕ್ ಶೇಖ್ ಗಾಯಗೊಂಡವರು. ಇವರು ಯಲ್ಲಾಪುರ ಕಡೆಯಿಂದ ಹಳಿಯಾಳ ಕಡೆಗೆ ಹೋಗುವಾಗ ಮುಂದಿನಿಂದ ಹೋಗುತ್ತಿದ್ದ ಕಾರಿಗೆ ಬೈಕ್ ಡಿಕ್ಕಿ ಹೊಡೆದಿದೆ. ಈ ಕುರಿತು ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES  ಸಂಘಟನೆಗಳು ಬಡ ಜನರಿಗೆ ಸರಕಾರದ ಸೌಲಭ್ಯ ತಲುಪಿಸುವಲ್ಲಿಯೂ ಶ್ರಮಿಸಬೇಕು - ನಾಗರಾಜ ನಾಯಕ ತೊರ್ಕೆ

ಕಾರಿಗೆ ಡಿಕ್ಕಿ ಹೊಡೆದ ಕಾರಣಕ್ಕಾಗಿ ಬೈಕ್ ಸವಾರರ ಮೇಲೆ ಕಾರಿನಲ್ಲಿದ್ದ ಮೂವರು ಹಲ್ಲೆ ನಡೆಸಿದ್ದಾರೆ. ಕಾರಿನಲ್ಲಿದ್ದ ಹುಬ್ಬಳ್ಳಿ ಲಿಂಗರಾಜನಗರದ ಅಶೋಕ ಸಂಗಪ್ಪ ರಾಜನಾಳ, ಧಾರವಾಡ ಹೊಸಯಲ್ಲಾಪುರದ ಸತೀಶ ಶಿವನಗೌಡ ಪಾಟೀಲ ಹಾಗೂ ಸುಭಾಸ ಶಿವನಗೌಡ ಪಾಟೀಲ ಎಂಬವರು ಬೈಕ್ ಸವಾರರ ಮೇಲೆ ಕಬ್ಬಿಣದ ರಾಡ್ ನಿಂದ ಹಲ್ಲೆ ಮಾಡಿದ್ದಾರೆ. ಕಾರಿನಲ್ಲಿದ್ದವರು ತಮ್ಮ ಕೊಲೆ ಯತ್ನ ನಡೆಸಿದ್ದಾರೆಂದು ಬೈಕ್ ಸವಾರರಿಬ್ಬರೂ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

RELATED ARTICLES  ಸುಟ್ಟು ಕರಕಲಾಯ್ತು ಬೋಟ್..!