ಯಲ್ಲಾಪುರ: ತಾಲೂಕಿನ ಟಿ ಎಂ ಎಸ್ ಬಳಿ ಅತಿವೇಗದಲ್ಲಿ ಬೈಕ್ ಚಲಾಯಿಸಿಕೊಂಡು ಬಂದ ವ್ಯಕ್ತಿ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಇವರ ತಲೆಗೆ, ಕಾಲಿಗೆ ಭಾರೀ ಸ್ವರೂಪದ ಗಾಯಗಳಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ ಘಟನೆ ನಡೆದ ಬಗ್ಗೆ ವರದಿಯಾಗಿದ್ದು,  ಯಲ್ಲಾಪುರ ರವೀಂದ್ರ ನಗರದ ಪಾಂಡುರಂಗ ಗಜಾನನ ನಾಯ್ಕ ಇವರು ಸಾವನ್ನಪ್ಪಿದ್ದ ವ್ಯಕ್ತಿಯಾಗಿದ್ದಾರೆ.

RELATED ARTICLES  ಬರಗದ್ದೆ ಗ್ರಾಮೀಣ ಸೇವಾ ಸಹಕಾರಿ ಸಂಘಕ್ಕೆ ನೂತನ ಅಧ್ಯಕ್ಷರ ಆಯ್ಕೆ : ಸಂಘದ ಬಾಗಿಲು ತೆರೆಯದ ಹಿಂದಿನ ಪದಾಧಿಕಾರಿಗಳು

ಫೆ.25 ರಂದು ಬೆಳಗ್ಗೆ 6:15 ರ ಸುಮಾರಿಗೆ ಯಲ್ಲಾಪುರ ತಾಲೂಕ ಕೆ.ಇ.ಬಿ ಹತ್ತಿರ, ಟಿ.ಎಮ್.ಎಸ್ ಎದುರಿಗೆ ಶಿರಸಿ-ಯಲ್ಲಾಪುರ ರಸ್ತೆಯ ಮೇಲೆ ಶಿರಸಿ ಕಡೆಯಿಂದ ಯಲ್ಲಾಪುರ ಕಡೆಗೆ ಅತಿವೇಗವಾಗಿ , ಅಜಾಗರೂಕತೆಯಿಂದ ಬೈಕ್ ಚಲಾಯಿಸಿಕೊಂಡು ಬಂದು ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದು , ಯಲ್ಲಾಪುರ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ ಎಂದು ದೂರಿನಲ್ಲಿ ದಾಖಲಾಗಿದೆ.

RELATED ARTICLES  ಬೋಟ್ ಹಾನಿ: ಮೀನುಗಾರನಿಗೆ 5 ಲಕ್ಷ ರೂ. ಪರಿಹಾರ ಒದಗಿಸಿದ ಶಾಸಕ ದಿನಕರ ಶೆಟ್ಟಿ