ಯಲ್ಲಾಪುರ : ತಾಲೂಕಿನಲ್ಲಿ ಕಳೆದ ೨ ತಿಂಗಳಿಂದ ಅಡಿಕೆ ಹಾಗೂ ಕಾಳು ಮೆಣಸು ಕಳ್ಳತನ ಪ್ರಕರಣಗಳು ದಾಖಲಾಗುತ್ತಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಲ್ಲಾಪುರ ಪೊಲೀಸರು ಇಬ್ಬರು ಕಳ್ಳರನ್ನು ಬಂಧಿಸಿದ್ದು, ಇನ್ನಿಬ್ಬರು ತಲೆಮರೆಸಿಕೊಂಡಿದ್ದಾರೆ. ಪ್ರಕರಣದ ತನಿಖೆಯಲ್ಲಿರುವಾಗ ದೊರೆತ ಖಚಿತ ಮಾಹಿತಿಯಿಂದ ತಾಲೂಕಿನ ಬಿಳ್ಕಿ ಗ್ರಾಮದ ಜಡಗಿನಕೊಪ್ಪದ ಪಿಲೀಪ್ ಕೃಷ್ಣ ಸಿದ್ಧಿ ಹಾಗೂ ಆನಂದ ಸೋಮಾ ಸಿದ್ಧಿ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದ್ದು, ವಿಚಾರಣೆ ವೇಳೆ ಆರೋಪಿತರು ಸವಣಗೇರಿ, ಹೊನ್ನಳ್ಳಿ, ಹೊಸ್ಮನೆ, ಕಲ್ಲಾರಜಡ್ಡಿಯಲ್ಲಿ ಅಡಿಕೆ, ಕಾಳುಮೆಣಸು ಕಳ್ಳತನ ಮಾಡಿರುವ ಬಗ್ಗೆ ತಿಳಿಸಿದ್ದಾರೆ. ಆರೋಪಿತರಿಂದ ಕೃತ್ಯಕ್ಕೆ ಉಪಯೋಗಿಸಿದ ೦೨ ಮೋಟಾರ ಸೈಕಲ್, ಕಳ್ಳತನವಾದ ೦೨ ಕ್ವಿಂಟಲ್ ಕೆಂಪು ಅಡಿಕೆ, ಹಾಗೂ ಸುಮಾರು ೨೨ ಕೆ.ಜಿ ಕಾಳುಮೆಣಸನ್ನು ವಶಪಡಿಸಿಕೊಳ್ಳಲಾಗಿದೆ.

RELATED ARTICLES  ಭಟ್ಕಳ ತಾಲೂಕಿನಾದ್ಯಂತ ಬಣ್ಣಗಳ ಹಬ್ಬವಾದ ಹೋಳಿ ಸಂಭ್ರಮ.!

ಸಿಪಿಐ ಸುರೇಶ ಯಳ್ಳೂರ ಇವರ ನೇತ್ರತ್ವದಲ್ಲಿ, ಪಿ.ಎಸ್.ಐ. ಮಂಜುನಾಥ ಗೌಡರ ಮತ್ತು ಪ್ರಿಯಾಂಕಾ ನ್ಯಾಮಗೌಡ, ಹಾಗೂ ಸಿಬ್ಬಂದಿಯವರಾದ ಬಸವರಾಜ ಹಗರಿ, ಮಹ್ಮದ ಶಫೀ, ಗಜಾನನ ನಾಯ್ಕ, ನಾಗಪ್ಪ ಲಮಾಣಿ, ಬಸವರಾಜ ಮಳಗಿನಕೊಪ್ಪ, ಸಕ್ರಪ್ಪ ಬ್ಯಾಳಿ, ಪರಶುರಾಮ ಕೆ, ನಂದೀಶ, ವಿಜಯ, ಚನ್ನಕೇಶವ, ಚಿದಾನಂದ, ಪ್ರವೀಣ ಪೂಜಾರ್, ಪರಶುರಾಮ ಹಾಗೂ ಶೋಭಾ ನಾಯ್ಕ ಆರೋಪಿಗಳನ್ನು ಬಂಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುತ್ತಾರೆ.

RELATED ARTICLES  ಹುಡ್ಲಮನೆ ಮಂಜಣ್ಣ ಅವರಿಗೆ ' ಜೀವನ ಸಾಧಕ ' ಪ್ರಶಸ್ತಿ : 'ತವರುಮನೆ' ಆಲೆಮನೆ ಹಬ್ಬದಲ್ಲಿ ಸಾಹಿತ್ಯದ ಘಮ ಘಮ