ರಷ್ಯಾ ಉಕ್ರೇನ್ ನಡುವಿನ ಯುದ್ಧದಿಂದಾಗಿ ಉಕ್ರೇನ್ ನಲ್ಲಿ ಸಿಲುಕಿ ಆತಂಕಕ್ಕೊಳಗಾಗಿರುವ ವಿದ್ಯಾರ್ಥಿನಿ ಸ್ನೇಹಾ ಹೊಸಮನಿ ತಂದೆಗೆ ವಿಡಿಯೋ ಕಾಲ್ ಮಾಡಿ ತಮ್ಮನ್ನು ವಾಪಸ್ಸ್ ಕರೆಸಿಕೊಳ್ಳುವಂತೆ ಅಳಲು ತೋಡಿಕೊಂಡಿರುವ ಘಟನೆ ನಡೆದಿದೆ.  ಕಾಲೇಜಿನ ಬಳಿಯೇ ಬಾಂಬ್ ಸ್ಫೋಟವಾಗ್ತಿದೆ… ಭಯ ಆಗ್ತಿದೆ, ಹೇಗಾದರೂ ಮಾಡಿ ನಮ್ಮನ್ನ ವಾಪಾಸ್ ಕರೆಯಿಸಿಕೊಳ್ಳಿ…. ಎಂದು ಸ್ನೇಹಾ ಹೊಸಮನಿ ಮುಂಡಗೋಡದ ಮನೆಯಲ್ಲಿರುವ ತನ್ನ ತಂದೆಗೆ ವಿಡಿಯೋ ಕರೆ ಮಾಡಿ ಆತಂಕ ತೋಡಿಕೊಂಡಿದ್ದಾಳೆ. ಬಂಕರ್‌ನಲ್ಲಿ ಉಳಿದಿದ್ದೆವು. ಆದರೆ ಅಲ್ಲಿ ಉಸಿರಾಟದ ಸಮಸ್ಯೆ ಉಂಟಾಗಿ ಮತ್ತೆ ವಾಪಸ್ಸು ರೂಮಿಗೆ ಬಂದ್ವಿ, ಭಯವಾಗುತ್ತಿದೆ, ಏನು ಮಾಡಬೇಕು ಎಂಬುದು ಗೊತ್ತಾಗುತ್ತಿಲ್ಲ ಎಂದು ಸ್ಥಳದಲ್ಲಿನ ವಸ್ತುಸ್ಥಿತಿಯನ್ನ ಸ್ನೇಹಾ ತನ್ನ ತಂದೆಗೆ ವಿಡಿಯೋ ಕಾಲ್‌ನಲ್ಲಿ ವಿವರಿಸಿದ್ದಾಳೆ. ಹೇಗಾದರೂ ಮಾಡಿ ನಮ್ಮನ್ನು ವಾಪಸ್ಸು ಕರೆಯಿಸಿಕೊಳ್ಳಿ ಎ೦ದು ಸ್ನೇಹಾ ತಂದೆ- ತಾಯಿಯಲ್ಲಿ ಬೇಡಿಕೊಂಡಿದ್ದಾಳೆ. ಈ ಸನ್ನಿವೇಶ ಎಂತವರ ಮನವನ್ನೂ ಕರಗಿಸುವಂತಿದೆ.

RELATED ARTICLES  ಲಾರಿ ಡಿಕ್ಕಿ : ಪಾದಚಾರಿ ವೃದ್ದೆ ಸಾವು.

ಯುದ್ಧದ ಭೀತಿ ಇದ್ದ ಕಾರಣ ಭಾರತೀಯರನ್ನು ಕರೆತರಲು ಮರು ವಿಮಾನಗಳನ್ನು ಭಾರತದಿಂದ ಕಳುಹಿಸಲಾಗಿತ್ತು. ಆದರೆ ಅದರಲ್ಲಿ ಅವಕಾಶ ಸಿಗದ ಹಿನ್ನಲೆಯಲ್ಲಿ ಖಾರ್ಕಿನಲ್ಲೇ ಸ್ನೇಹಾ ಉಳಿದಿದ್ದಳು. ಯುದ್ಧದ ಕಾರಣ ಭಾರತದ ವಿಮಾನಗಳ ಹಾರಾಟ ಬಂದ್ ಆಗಿದ್ದರಿಂದ ಸ್ನೇಹಾ ಮುಂದಿನ ತಿಂಗಳು ಎಂಟನೇ ತಾರೀಖಿಗೆ ಟಿಕೆಟ್ ಕಾಯ್ದಿರಿಸಿದ್ದಾಳೆ. ಅಲ್ಲಿಯವರೆಗೆ ಬಂಕರ್‌ನಲ್ಲೇ ಸುರಕ್ಷಿತ ವಾಗಿರಲು ಬೇರೆ
ದೇಶದ ವಿದ್ಯಾರ್ಥಿಗಳಿಗೆ ಹಾಗೂ ನಾಗರಿಕರಿಗೆ ಉಕ್ರೇನ್ ಭದ್ರತಾ ಪಡೆ ವ್ಯವಸ್ಥೆ ಮಾಡಿತ್ತು. ಆದರೆ ಅಲ್ಲಿ ಜನ ಹೆಚ್ಚಾಗಿರುವ ಕಾರಣ ನೀರು ಹಾಗೂ ಗಾಳಿಯ ವ್ಯವಸ್ಥೆ ಸರಿಯಾಗಿಲ್ಲ ಎನ್ನಲಾಗಿದೆ. ಇದರಿಂದಾಗಿ ಸ್ನೇಹಾ ಸೇರಿದಂತೆ ಕೆಲವರು ತಮ್ಮ ರೂಮುಗಳಿಗೆ ಮರಳಿ ಪಾಲಕರಿಗೆ ಕರೆ ಮಾಡಿ ಅಳಲು ತೋಡಿಕೊಂಡಿದ್ದಾರೆ. ಇದರಿಂದಾಗಿ ಕುಟುಂಬಸ್ಟರೂ ಈಗ ಭಯಭೀತರಾಗಿದ್ದಾರೆ.

RELATED ARTICLES  ವೃದ್ದೆಗೆ ಮಂಗ ಕಚ್ಚಿ ಗಾಯ, ಆಸ್ಪತ್ರೆಗೆ ದಾಖಲು

ಮುಂಡಗೋಡ ಮೂಲದ ದಲಿತ ಸಂಘರ್ಷ ಸಮಿತಿ ತಾಲ್ಲೂಕಾ ಅಧ್ಯಕ್ಷ ಪಕೀರಪ್ಪ ಹೊಸಮನಿ ಪುತ್ರಿ ಉಕ್ರೇನ್ ನಲ್ಲಿ ಎಂಬಿಬಿಎಸ್ ವಿದ್ಯಾಭ್ಯಾಸ ಮಾಡುತ್ತಿದ್ದು, ಇದೀಗ ರಷ್ಯಾ ಉಕ್ರೇನ್ ನಡುವಿನ ಯುದ್ಧದಿಂದಾಗಿ ಆತಂಕಕ್ಕೊಳಗಾಗಿದ್ದಾರೆ. ಮಗಳ ಪರಿಸ್ಥಿತಿ ಕಂಡು ಇದೀಗ ಪಾಲಕರು ಭಯಗೊಂಡಿದ್ದು ಮಗಳನ್ನು ಕರೆತರಲು ಕ್ರಮ ಕೈಗೊಳ್ಳುವಂತೆ ಪಾಲಕರು ಆಗ್ರಹಿಸಿದ್ದಾರೆ.