ಮಹಿಳೆಯೊಬ್ಬಳು ಅಡುಗೆ ಮಾಡುತ್ತಿದ್ದ ಸಂದರ್ಭದಲ್ಲಿ ಪುಟ್ಟಮಗು ಏನೂ ಅರಿಯದೆ ಆಟವಾಡುತ್ತಾ ಬಂದು ಸೀಮೆಎಣ್ಣೆ ತುಂಬಿಸಿಟ್ಟಿದ್ದ ಕ್ಯಾನ್ ಅನ್ನು ಬೀಳಿಸಿ ಬಿಟ್ಟ ಪರಿಣಾಮ ಮಹಿಳೆಯ ಸೀರೆಗೆ ಬೆಂಕಿ ಹೊತ್ತುಕೊಂಡು ತೀವ್ರತರ ಪೆಟ್ಟಾಗಿದ್ದು ಮಹಿಳೆ  ಕಾರವಾರದ ಬಾಂಬೋಲಿಯಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾಳೆ. ಅನಸೂ ಅಹಿರವಾರ್ ಮೃತ ಮಹಿಳೆಯಾಗಿದ್ದಾಳೆ. ಹೀಗೆ ಸಾವಿನಿಂದ ಮನೆಯಲ್ಲಿ ಸ್ಮಶಾನಮೌನ ಆವರಿಸಿದೆ. ಏನನ್ನು ಅರಿಯದ ಪುಟ್ಟ ಕಂದಮ್ಮ ತಾಯಿಯನ್ನು ಕಳೆದುಕೊಂಡು ಮೂಕವೇದನೆ ಅನುಭವಿಸುತ್ತಿದ್ದೆ.

RELATED ARTICLES  ಇಂದು ರಾತ್ರಿಯಿಂದಲೇ ಟೋಲ್ ಶುಲ್ಕ: ನಾಳೆ ಕರವೇ ಕಾರ್ಯಕರ್ತರಿಂದ ಪ್ರತಿಭಟನೆ

ನಾಲ್ಕು ದಿನಗಳ ಹಿಂದೆ ಮನೆಯಲ್ಲಿ ಅಡುಗೆ ಮಾಡುತ್ತಿದ್ದ ವೇಳೆ ಈಕೆಯ ಪುಟ್ಟ ಮಗ ಆಟ ಆಡುತ್ತಾ ಸೀಮೆಎಣ್ಣೆ ಕ್ಯಾನ್ ಬೀಳಿಸಿಬಿಟ್ಟಿದ್ದ. ಇದರಿಂದಾಗಿ ಅನಸೂ ಸೀರೆಗೂ ಬೆಂಕಿ ತಗುಲಿತ್ತು. ಪತಿ ಬೆಂಕಿ ನಂದಿಸಲು ಮುಂದಾಗಿ ಇಬ್ಬರೂ ಗಾಯಗೊಂಡಿದ್ದರು. ಹೆಚ್ಚಿನ ಗಾಯಗೊಂಡಿದ್ದ ಅನಸೂಳಿಗೆ ಕಾರವಾರದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಬಾಂಬೋಲಿಯಮ್ ಗೆ ರವಾನಿಸಲಾಗಿತ್ತು. ಇದೀಗ ಚಿಕಿತ್ಸೆಫಲಿಸದೇ ಕೊನೆಯುಸಿರೆಳೆದಿದ್ದಾಳೆ.

RELATED ARTICLES  ಸಾಂಸ್ಕೃತಿಕ ರಂಗದಲ್ಲಿ ಜಿ.ಸಿ ಕಾಲೇಜಿನ ವಿದ್ಯಾರ್ಥಿಗಳ ಅಮೋಘ ಸಾಧನೆ: ಹರಿದುಬಂದ ಅಭಿನಂದನೆ