ಕುಮಟಾ : ಉತ್ತರಕನ್ನಡದ ವಿವಿಧ ತಾಲೂಕಿನಿಂದ ಒಂದಿಲ್ಲೊಂದು ಆತ್ಮಹತ್ಯೆ ಪ್ರಕರಣ ವರದಿಯಾಗುತ್ತಲೇ ಇರುತ್ತಿದೆ. ಇಂದು ಸಹ ತಾಲೂಕಿನಲ್ಲಿ ಆತ್ಮಹತ್ಯೆ ಪ್ರಕರಣವೊಂದು ನಡೆದಿದೆ ಎನ್ನಲಾಗಿದೆ. ಮಕ್ಕಳಾಗಿಲ್ಲವೆಂಬುದನ್ನೆ ಮನಸ್ಸಿಗೆ ಹಚ್ಚಿಕೊಂಡಿದ್ದ ವಿವಾಹಿತನೋರ್ವ ಮನನೊಂದು ನೇಣಿಗೆ ಶರಣಾಗಿರುವ
ಘಟನೆ ನಡೆದ ಬಗ್ಗೆ ವರದಿಯಾಗಿದೆ. ಕುಮಟಾ ಪಟ್ಟಣದ ಹಳೇ ಹೆರವಟ್ಟಾದಲ್ಲಿ ಈ ಘಟನೆ ನಡೆದಿದ್ದು, ಹೆರವಟ್ಟಾ ನಿವಾಸಿ ಮನೋಜ ಆತ್ಮಹತ್ಯೆಗೆ ಶರಣಾದವನು ಎನ್ನಲಾಗಿದೆ.

RELATED ARTICLES  ಮಧ್ಯದಂಗಡಿಗೆ ಪರವಾನಿಗೆ ನೀಡದಂತೆ ಮನವಿ.

ಈತ ವಿವಾಹವಾಗಿ 9 ವರ್ಷಗಳು ಕಳೆದರೂ ಮಕ್ಕಳಾಗಿಲ್ಲ ಎಂಬ ಕಾರಣಕ್ಕೆ ವಿಪರೀತ ಬೇಸರಗೊಂಡಿದ್ದ ಹಾಗೂ ಕುಡಿತದ ಚಟಕ್ಕೊಳಗಾಗಿದ್ದ ಎಂಬ ಮಾತುಗಳೂ ಕೇಳಿ ಬರುತ್ತಿದೆ. ಈ ಸಂಬಂಧ ಪತ್ನಿಗೆ ಕಿರುಕುಳ ನೀಡುತ್ತಿದ್ದ ಎಂಬುದೂ ಸ್ಥಳೀಯ ಮಾತಾಗಿದೆ. ಪತಿಯ ಕಿರುಕುಳ ಸಹಿಸಲಾಗದೇ ಪತ್ನಿಯು ತವರು ಮನೆಗೆ ತೆರಳಿದ್ದಳಿಂದ ಇನ್ನಷ್ಟು ಮನನೊಂದ ಮನೋಜ ಮನೆಯ ಜಂತಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

RELATED ARTICLES  ಜಿಲ್ಲೆಯ ಅನೇಕ ದೇವಾಲಯಗಳು‌ ಮಾಹಿತಿ ಹಕ್ಕಿನಡಿ : ಇನ್ನು ಅನಗತ್ಯ ಕಾರಣ ನೀಡಿ ಸಾರ್ವಜನಿಕರ ಅರ್ಜಿ ತಿರಸ್ಕರಿಸುವಂತಿಲ್ಲ

ಸ್ಥಳಕ್ಕಾಗಮಿಸಿದ ಕುಮಟಾ ಪೊಲೀಸರು ಮೃತದೇಹವನ್ನು ತಾಲೂಕು ಆಸ್ಪತ್ರೆಗೆ ಸಾಗಿಸಿ, ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.