ಭಟ್ಕಳ : ತಾಲೂಕಿನ ಪ್ರಭಾರ ತಹಶೀಲ್ದಾರ್‌ ಆಗಿ ಅಶೋಕ ಭಟ್ಟ ಅಧಿಕಾರ ಸ್ವೀಕರಿಸಿದ್ದಾರೆ. ಶಾಸಕ ದಿನಕರ ಶೆಟ್ಟಿ ಹಾಗೂ ಅದಕ್ಕೂ ಹಿಂದೆ ಮಂಕಾಳು ವೈದ್ಯರ ಆಪ್ತ ಸಹಾಯಕರಾಗಿ ಜನ ಮೆಚ್ಚುಗೆ ಪಡೆದಿದ್ದ ಇವರು ಕುಮಟಾ ಸಹಾಯಕ ಆಯುಕ್ತರ ಕಚೇರಿಯಲ್ಲಿ ಗ್ರೇಡ್-2 ತಹಸೀಲ್ದಾರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದರು. ತಮ್ಮ ಆತ್ಮೀಯ ಮಾತು ಹಾಗೂ ಸ್ನೇಹಮಯ ಪ್ರವೃತ್ತಿಯಿಂದಲೇ ಎಲ್ಲರ ಮೆಚ್ಚುಗೆ ಪಡೆದವರು.

RELATED ARTICLES  ಮಳೆಯಿಂದ ನೀರು ತುಂಬಿದ ಪ್ರದೇಶಗಳಿಗೆ ಶಾಸಕಿ ರೂಪಾಲಿ ನಾಯ್ಕ ಭೇಟಿ

ಭಟ್ಕಳದಲ್ಲಿ ತೆರವಾದ ತಹಸೀಲ್ದಾರ ಸ್ಥಾನಕ್ಕೆ ಅಶೋಕ ಭಟ್ಟ ಅವರನ್ನು ನೇಮಿಸಿ ಜಿಲ್ಲಾಧಿಕಾರಿ ಮುಲೈಮುಗಿಲನ್ ಆದೇಶ ಹೊರಡಿಸಿದ್ದು ಇದೀಗ ಅವರು ಅಧಿಕಾರ ವಹಿಸಿಕೊಂಡರು. ಕುಮಟಾ ಎಸಿ ಕಚೇರಿಯ ಗ್ರೇಡ್ 2 ತಹಸೀಲ್ದಾರ ಹೊಣೆಗಾರಿಕೆಯೂ ಮುಂದುವರೆಯಲಿದೆ. ಈ ಹಿಂದೆಯೂ ಅಶೋಕ ಭಟ್ಟ ಅವರು ಹೊನ್ನಾವರ ಹಾಗೂ ಭಟ್ಕಳದ ಕಂದಾಯ ಇಲಾಖೆಯಲ್ಲಿ ಕೆಲಸ ನಿರ್ವಹಿಸಿದ ಅನುಭವ ಹೊಂದಿದ್ದಾರೆ.

RELATED ARTICLES  ಮಂದಾರ ಸಾಂಸ್ಕೃತಿಕ ಮತ್ತು ಕ್ರೀಡಾ ಸಂಘ ಕವಲಕ್ಕಿಯವರ ಆಶ್ರಯದಲ್ಲಿ ಸಂಪನ್ನವಾದ ವಾಲಿಬಾಲ್ ಪಂದ್ಯಾವಳಿ.