ಕುಮಟಾ : ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಶ್ರೀ ಡಿ. ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ ಕುಮಟಾ ಇದರ ಹೆಚ್ಚುವರಿ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ 62 ಲಕ್ಷ ರೂಪಾಯಿಗಳ ಕಾಮಗಾರಿಗೆ ಮಾನ್ಯ ಶಾಸಕರಾದ ಶ್ರೀ ದಿನಕರ ಕೆ. ಶೆಟ್ಟಿ ಯವರು ಶಂಕುಸ್ಥಾಪನೆ ನೆರವೇರಿಸಿದರು .ಈ ಸಂದರ್ಭದಲ್ಲಿ ಮಾತನಾಡಿದ ಮಾನ್ಯ ಶಾಸಕರು ಉತ್ತಮ ಗುಣಮಟ್ಟದ ಕಾಮಗಾರಿ ನಡೆಸುವಂತೆ ಗುತ್ತಿಗೆದಾರರಿಗೆ ಹಾಗೂ ಅಧಿಕಾರಿಗಳಿಗೆ ಸೂಚಿಸಿದರು .
ಈ ಸಂದರ್ಭದಲ್ಲಿ ಕುಮಟ ಪುರಸಭೆಯ ಅಧ್ಯಕ್ಷರಾದ ಶ್ರೀಮತಿ ಮೋಹಿನಿ ಗೌಡ ,ಸ್ಥಳೀಯ ವಾರ್ಡ್ ಸದಸ್ಯರಾದ ಶ್ರೀಮತಿ ಗೀತಾ ಮುಕ್ರಿ, ಪುರಸಭೆ ಸದಸ್ಯರಾದ ಶ್ರೀ ಸಂತೋಷ ನಾಯ್ಕ, ಗೇರು ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷರಾದ ಶ್ರೀ ವಿನೋದ ಪ್ರಭು, ಮುಖಂಡರಾದ ಶ್ರೀ ವಿಶ್ವನಾಥ ನಾಯ್ಕ,ಶ್ರೀ ಬಿ.ಜಿ .ಶಾನಭಾಗ್, ಶ್ರೀ ವೆಂಕಟೇಶ ನಾಯ್ಕ, ಪಿ, ಆರ್. ಇ. ಡಿ. ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಶ್ರೀ ಆರ್. ಜಿ. ಗುನಗಿ, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಸಿ.ಟಿ .ನಾಯ್ಕ, , ವಲಯ ಅರಣ್ಯಾಧಿಕಾರಿ ಶ್ರೀ ಪ್ರವೀಣ್ ಕುಮಾರ್, ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಶ್ರೀ ಗಣೇಶ್ ಜಿ. ಪಟಗಾರ್, ತಾಲೂಕು ವಿಸ್ತರಣಾಧಿಕಾರಿ ಶ್ರೀ ಗಜಾನನ ಹೆಗಡೆ ,ಸಹಾಯಕ ಇಂಜಿನಿಯರ್ ಗಜಾನನ ನಾಯ್ಕ, ಗುತ್ತಿಗೆದಾರರಾದ ಶ್ರೀ ಗಣೇಶ್ ನಾಯ್ಕ ಹೆಗಡೆ , ತಾಲೂಕಿನ ಹಿಂ. ವ. ಕ . ಇಲಾಖೆಯ ಸಿಬ್ಬಂದಿ ವರ್ಗದವರು, ನಿಲಯದ ವಿದ್ಯಾರ್ಥಿಗಳು ಇನ್ನಿತರರು ಹಾಜರಿದ್ದರು.