ನೇಪಿಡಾ: ರೊಹಿಂಗ್ಯಾ ಜಗತ್ತಿನ ದೃಷ್ಟಿಕೋನ ಏನೇ ಇರಲಿ..ಆದರೆ ನಮಗೆ ದೇಶದ ರಕ್ಷಣೆ ಮುಖ್ಯ ಎಂದು ಮಯನ್ಮಾರ್ ನಾಯಕಿ ಆಂಗ್ ಸಾನ್ ಸೂಕಿ ಮಂಗಳವಾರ ಹೇಳಿದ್ದಾರೆ.
ರೊಹಿಂಗ್ಯಾ ಮುಸ್ಲಿಮರ ಸಾಮೂಹಿಕ ಪಲಾಯನ ಕುರಿತಂತೆ ಇದೇ ಮೊದಲ ಬಾರಿಗೆ  ಮೌನ ಮುರಿದಿರುವ ಸೂಕಿ ಟಿವಿಮಾಧ್ಯಮದಲ್ಲಿ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದರು.
“4 ಲಕ್ಷ  ರೋಹಿಂಗ್ಯಾ ಮುಸ್ಲಿಮರು ಬಾಂಗ್ಲಾದೇಶಕ್ಕೆ ಪಲಾಯನ ಮಾಡಿದ್ದಾರೆ. ಜನಾಂಗೀಯ ಸಮಸ್ಯೆಯಿಂದ ನಮ್ಮ ರಾಷ್ಟ್ರಕ್ಕೆ ಜಾಗತಿಕವಾಗಿ ಕೆಟ್ಟ ಹೆಸರು ಬರುತ್ತಿದೆ” ಎಂದಿದ್ದಾರೆ.
ಇದೇ ವೇಳೆ “ರಾಖೈನ್ ರಾಜ್ಯದಲ್ಲಿ ನಡೆದ ಸಂಘರ್ಷದಲ್ಲಿ ತೊಂದರೆಗೆ ಸಿಲುಕಿರುವ ಎಲ್ಲರ ಬಗೆಗೆ ನನಗೆ ದುಃಖವಿದೆ. ನಾನು ಇದಕ್ಕಾಗಿ ತೀವ್ರವಾಗಿ ವಿಷಾದಿಸುತ್ತೇನೆ. ಮುಸ್ಲಿಮರನ್ನು ಬಾಂಗ್ಲಾದೇಶಕ್ಕೆ ಪಲಾಯನವಾಗುವಂತೆ ನಾವು ಹೇಳಿಲ್ಲ, ಆದರೆ ಬಿಕ್ಕಟ್ಟಿನ ಉಲ್ಬಣಕ್ಕೆ ಕಾರಣವಾದ ಯಾವುದೇ “ಮಾನವ ಹಕ್ಕುಗಳ ಉಲ್ಲಂಘನೆ” ಯನ್ನು ನಾನು ಖಂಡಿಸುತ್ತೇನೆ ಸೂಕಿ ಹೇಳಿದರು.ಕಳೆದ ತಿಂಗಳು ಉಂಟಾದ ಹಿಂಸಾಚಾರದ ಕಾರಣ ಬಾಂಗ್ಲಾದೇಶಕ್ಕೆ ಪಲಾಯನ ಮಾಡಿದ್ದ 4 10,000 ರೋಹಿಂಗ್ಯಾ ಮುಸ್ಲಿಮರ ಸ್ಥಿತಿಗತಿಯನ್ನು ಪರಿಶೀಲಿಸಲು ಮಾಯನ್ಮಾರ್ ಯಾವುದೇ ಸಮಯದಲ್ಲಿ ಸಿದ್ಧವಾಗಿದೆ. ಆದರೆ ಮಯನ್ಮಾರ್ ಅನ್ನು ಧಾರ್ಮಿಕ ನಂಬಿಕೆಗಳು ಅಥವಾ ಜನಾಂಗೀಯ ದ್ವೇಷದಿಂದ ಬಾಧಿಸಲ್ಪಡುವ ರಾಷ್ಟ್ರವಾಗಬೇಕೆಂದು ನಾವು ಬಯಸುವುದಿಲ್ಲ … ನಮ್ಮ ವೈವಿದ್ಯತೆಯ ಮೇಲೆ ನಮಗೆ ಎಲ್ಲಾ ಹಕ್ಕುಗಳಿವೆ.” ಸೂಕಿ ಹೇಳಿದರು.
ಮಯನ್ಮಾರ್ ನಿಂದ ಪಲಾಯನ ಮಾಡಿದ 410,000 ರೋಹಿಂಗ್ಯಾ ಮುಸ್ಲಿಮರಲ್ಲಿ ಎಷ್ಟು ಮಂದಿ ದೇಶಕ್ಕೆ ಮರಳಲಿದ್ದಾರೆಂದು ಈಗಲೇ ಹೇಳಲು ಸಾಧ್ಯವಿಲ್ಲ. ಆದರೆ ಮಯನ್ಮಾರ್ ಅಲ್ಲಿ ವಾಸಿಸಲು ಬಯಸುವ ಮುಸ್ಲಿಂ ಜನಾಂಗದ ಹಕ್ಕುಗಳ ವಿಷಯದಲ್ಲಿ ವಿನಾಶಕಾರಿ ಚರ್ಚೆಗೆ ಈಗ ನಮ್ಮ ದೇಶ ಗ್ರಾಸವಾಗಿದೆ.
ಮಯನ್ಮಾರ್ ಸೈನ್ಯವು ಈ ಹಿಂದೆ ಭಯೋತ್ಪೊಆದಕರೊದನೆ ನಂಟು ಹೊಂದಿದ್ದ ರೋಹಿಂಗ್ಯಾಗಳನ್ನು ದೇಅದಿಂದ ಹೊರ್ದೂಡುವುದಾಗಿ ಹೇಳಿತ್ತು. ಆದರೆ ನಾವೆಲ್ಲಿಯೂ ರೋಹಿಂಗ್ಯಾಗಳನ್ನು ರಾಷ್ಟ್ರದಿಂದ ಹೊರಹಾಕುತ್ತೇವೆ ಎಂಡು ಅಧಿಕೃತ ಹೇಳಿಕೆ ನೀಡಿರಲಿಲ್ಲ.
ಆದರೆ ವಿಶ್ವ ಸಂಸ್ಥೆಯು ಮಾಯನ್ಮಾರ್ ರೋಹಿಂಗ್ಯಾ ಹಳ್ಳಿಗಳ ಮೇಲೆ ವಿನಾಕಾರಣ ಸೈನಿಕರನ್ನು ನುಗ್ಗಿಸಿ ಅವರನ್ನು ಹಳ್ಳಿಯಿಂದ ಓಡಿಸಿದ್ದಲ್ಲದೆ ಅವರ ಗುಡಿಸಲನ್ನು, ವಸತಿಯನ್ನೂ ನಾಶಪಡಿಸಿದೆ ಎಂಡು ಆರೋಪಿಸಿದೆ.
ಕಳೆದ ಆಗಸ್ಟ್ ನಲ್ಲಿ ಯಾರು ಭಯೋತ್ಪಾದಕರೊದನೆ ಸಂಪರ್ಕ ಹೊಂದಿದ್ದರೋ ಅಂತಹಾ ರೋಹಿಂಗ್ಯಾ ಮುಸ್ಲೀಮರ ವಸತಿ ಮೇಲೆ ಸೈನ್ಯ ದಾಳಿ ನಡೆಸಿತ್ತು.
ಈ ಧಾಳಿಯಿಂದ ನೊಂದ ಸಾವಿರಾರು ರೋಹಿಂಗ್ಯಾಗಳು ಬಾಂಗ್ಲಾದೇಶಕ್ಕೆ ಪಲಾಯನ ಮಾಡಿದ್ದರು ಮತ್ತು ವಿಶ್ವದ ಅತಿ ದೊಡ್ಡ ನಿರಾಶ್ರಿತರ ಶಿಬಿರದಲ್ಲಿ ಒಂದಾದ ರೋಹಿಂಗ್ಯಾ ನಿರಾಶ್ರಿತರ ಶಿಬಿರವು ಅಲ್ಲಿ ನಿರ್ಮಾಣವಾಗಿದೆ
ಇನ್ನು 30,000 ಜನಾಂಗೀಯ ರಾಖೈನ್ ನ ಬೌದ್ಧರು ಮತ್ತು ಹಿಂದೂಗಳು ಕೂಡ ಪಲಾಯನ ಮಾಡಿದ್ದಾರೆ- ಅರಾಕನ್ ರೋಹಿಂಗ್ಯಾ ಸಾಲ್ವೇಶನ್ ಆರ್ಮಿ (ಎಆರ್ ಎಸ್ಎ) ಆಗಸ್ಟ್ 25ರ ದಾಳಿಯಲ್ಲಿ ಮಾಯನ್ಮಾರ್ ಸೈನ್ಯದ ಸ್ಪಷ್ಟ ಗುರಿ ಆಗಿತ್ತು.
RELATED ARTICLES  ಇಂದಿನ ನಿಮ್ಮ ದಿನ ಭವಿಷ್ಯ ಹೇಗಿದೆ?ಯಾವ ರಾಶಿಯವರಿಗೆ ಏನು ಫಲ? ಅದೃಷ್ಟ ಸಂಖ್ಯೆ ಯಾವುದು? ದಿನಾಂಕ 18/10/2018 ರ ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ …