ನ್ಯೂಸ್ ಬ್ಯೂರೋ : ‘ಕ್ರೇಜಿ ಸ್ಟಾರ್’ ವಿ ರವಿಚಂದ್ರನ್ ಅವರ ತಾಯಿ, ಖ್ಯಾತ ನಿರ್ಮಾಪಕ ವೀರಸ್ವಾಮಿ ಪತ್ನಿ ಪಟ್ಟಮ್ಮಾಳ್ ವೀರಸ್ವಾಮಿ ಅವರು ಇಂದು ಬೆಳಗ್ಗೆ 6.30ಕ್ಕೆ ನಿಧನರಾಗಿದ್ದಾರೆ. ಅವರಿಗೆ 83 ವರ್ಷವಾಗಿತ್ತು. ಪಟ್ಟಮ್ಮ ಅವರಿಗೆ ಐವರು ಮಕ್ಕಳು, ಮೂವರು ಹೆಣ್ಣು ಮಕ್ಕಳು, ಇಬ್ಬರು ಗಂಡು ಮಕ್ಕಳು. ಅನಾರೋಗ್ಯ ಕಾರಣದಿಂದ ಅವರು ಬೆಂಗಳೂರಿನ ಸುಗುಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. 10.30 ನಂತರ ಅವರ ಮನೆಗೆ ಇಂದು ಪಾರ್ಥಿವ ಶರೀರವನ್ನು ತರಲಾಗುವುದು, ಸಂಜೆ ಅಂತ್ಯಕ್ರಿಯೆ ನಡೆಯುವುದು ಎಂದು ರವಿಚಂದ್ರನ್ ತಿಳಿಸಿದ್ದಾರೆ.

RELATED ARTICLES  ಸರಣಿ ರೈಲು ಅಪಘಾತ : ಜನ ಕಂಗಾಲು

ಬಹಳ ಸಮಯದಿಂದ ರವಿಚಂದ್ರನ್ ತಾಯಿ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಈ ಬಗ್ಗೆ ಹಲವು ವೇದಿಕೆಗಳಲ್ಲಿ ರವಿಚಂದ್ರನ್ ಮಾಹಿತಿ ನೀಡಿದ್ದರು. ತಾಯಿಯನ್ನು ನೋಡಿಕೊಳ್ಳೇಕು ಎಂಬ ಕಾರಣಕ್ಕೆ ರವಿಚಂದ್ರನ್ ಪತ್ನಿ ಸುಮತಿ ಹೆಚ್ಚಾಗಿ ಯಾವುದೇ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರಿಲಿಲ್ಲವಂತೆ. ಪುನೀತ್ ರಾಜ್‌ಕುಮಾರ್ ನಿಧನ ಹೊಂದಿನ ದಿನ ಕೂಡ ರವಿಚಂದ್ರನ್ ತಾಯಿ ಅವರ ಸ್ಥಿತಿ ಗಂಭೀರವಾಗಿತ್ತು, ಐಸಿಯುವಿನಲ್ಲಿ ದಾಖಲಿಸಿದ್ದರು. ಆದರೆ ಅಪ್ಪುಗೆ ಹುಷಾರಿಲ್ಲ ಎಂದು ತಿಳಿದು ಅವರು ಪುನೀತ್ ಇದ್ದ ಆಸ್ಪತ್ರೆಗೆ ದೌಡಾಯಿಸಿದ್ದರು. ಇವೆಂಟ್‌ವೊಂದರಲ್ಲಿ ಭಾಗವಹಿಸಿದ್ದ ರವಿಚಂದ್ರನ್ ಅವರು ತಾಯಿಗೆ ವಯಸ್ಸಾಗಿದೆ, ಸರಿಯಾಗಿ ಎಲ್ಲರನ್ನು ಗುರುತಿಸೋದಿಲ್ಲ ಎಂದಿದ್ದರು.

RELATED ARTICLES  ಒಖಿ ಚಂಡಮಾರುತ : ಜನಜೀವನ ಸಂಪೂರ್ಣ ಅಸ್ತವ್ಯಸ್ತ