ಅಂಕೋಲಾ: ತಾಲೂಕಿನ ಹಟ್ಟಿಕೇರಿ -ಅರೆಗದ್ದೆ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಬೈಕ್ ಸ್ಕಿಡ್ ಆಗಿ ಬಿದ್ದ ಘಟನೆ ನಡೆದಿದ್ದು, ಶಿವರಾತ್ರಿಯ ದಿನವೇ ಸಂಭವಿಸಿದ ಈ ದುರಂತದಲ್ಲಿ ಬೈಕ್ ಸವಾರ ಮೃತ ಪಟ್ಟಿರುವ ಬಗ್ಗೆ ವರದಿಯಾಗಿದೆ. ಬೈಕ್ ಸವಾರ ಅಂಕೋಲಾ ಕಡೆಯಿಂದ ಕಾರವಾರ ಕಡೆಗೆ ತನ್ನ ಬೈಕನ್ನು ಚಲಾಯಿಸಿಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ, ಬೈಕ್ ಮೇಲಿನ ನಿಯಂತ್ರಣ ಕಳೆದುಕೊಂಡು, ಬೈಕ್ ಸ್ಕಿಡ್ ಆಗಿ ಬಿದ್ದು ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಘಟನೆಯಲ್ಲಿ ಸಾವನ್ನಪ್ಪಿದವನನ್ನು ಅಂಕೋಲಾ ತಾಲೂಕಿನ ಸಕಲಬೇಣ ನಿವಾಸಿ ಸುರೇಶ ಮೋಹನ ಅಂಬಿಗ ಎಂದು ಗುರುತಿಸಲಾಗಿದೆ.
ಈತನು ರಸ್ತೆಯ ಡಿವೈಡರಗೆ ಜೋರಾಗಿ ಡಿಕ್ಕಿ ಹೊಡೆದ ಪರಿಣಾಮವಾಗಿ ತಲೆ, ಮುಖ, ಕೈ ಕಾಲುಗಳಿಗೆ ಗಂಭೀರ ಗಾಯಗೊಂಡು, ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಬಿದ್ದಿದ್ದ ಎನ್ನಲಾಗಿದ್ದು ಅದನ್ನು ಗಮನಿಸಿ ಕಾರವಾರದಿಂದ ಅಂಕೋಲಾ ಮಾರ್ಗವಾಗಿ ಬರುತ್ತಿದ್ದ ಗೋಕರ್ಣ – ತಲಗೇರಿ ಮೂಲದ ಗಣೇಶ ಎಂಬಾಂತ ತನ್ನ ಅಂಬುಲೆನ್ಸ ವಾಹನದ ಮೂಲಕ IRB ಸಿಬ್ಬಂದಿಗಳು ಮತ್ತು ಸ್ಥಳೀಯರ ಸಹಕಾರದಲ್ಲಿ ಗಾಯಾಳು ಬದುಕಿರಬಹುದೆಂಬ ತಾಲೂಕಾ ಆಸ್ಪತ್ರೆಗೆ ಸಾಗಿಸಿದರಾದರೂ ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ.