ಕಾರವಾರ : ಕುಡಿದ ಮತ್ತಲ್ಲಿ ಬಸ್ ನಿಲ್ದಾಣದ ಸಾರ್ವಜನಿಕ ಶೌಚಾಲಯದ ಬಾಗಿಲು ಹಾಕಿ ಮಲಗಿ ಬಸ್ ನಿಲ್ದಾಣದ ಸಿಬ್ಬಂದಿಗಳಿಗೆ ಕುಡುಕನೊಬ್ಬ ಗಾಬರಿ ಗೊಳಿಸಿದ ಅಂಕೋಲ ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ನಡೆದಿದೆ. ಮಂಗಳೂರು ಮೂಲದ ಕಾಪುವಿನ ಮಂಜುನಾಥ್ ರಾತ್ರಿ ಕುಡಿದ ಅಮಲಿನಲ್ಲಿ ಶೌಚಾಲಯಕ್ಕೆ ಹೋಗಿ ಚಿಲಕ ಹಾಕಿ ಮಲಗಿದ್ದಾನೆ. ಈ ವೇಳೆ ಘಂಟೆಗಳೇ ಕಳೆದಾಗ ಶೌಚಾಲಯ ಸಿಬ್ಬಂದಿ ಬಾಗಿಲು ಬಡಿದಾಗ ಪ್ರತಿಕ್ರಿಯೆ ಬಾರದಿದ್ದಾಗ ಕಿಟಿಕಿಯಿಂದ ನೋಡಿದಾಗ ಶೌಚಾಲಯದಲ್ಲಿ ಶವದ ರೀತಿ ಬಿದ್ದಿರಿವುದು ಕಂಡು ಪೊಲೀಸರು ಹಾಗೂ ನಿಲ್ದಾಣದ ಸಿಬ್ಬಂದಿ ಬಾಗಿಲು ಒಡೆದು ಒಳಹೋದಾಗ ಈತ ನ ನಿಜ ಸ್ಥಿತಿ ತಿಳಿದು ನಿಟ್ಟುಸಿರು ಬಿಟ್ಟಿದ್ದಾರೆ.
ಪ್ರತಿನಿತ್ಯ ಈ ಬಸ್ ನಿಲ್ದಾಣಕ್ಕೆ ಸಾವಿರಾರು ಪ್ರಯಾಣಿಕರು ಬಂದು ಹೋಗುತ್ತಿದ್ದು,ಶಿವರಾತ್ರಿ ಮತ್ತಿತರ ಕಾರಣಗಳಿಂದ ಬಸ್ ನಿಲ್ದಾಣ ಜನರಿಂದ ತುಂಬಿ ತುಳುಕುತ್ತಿತ್ತು.ಹೊಸ ಬಸ್ ನಿಲ್ದಾಣದ ಹಿಂಬದಿಯಲ್ಲಿ ಈ ಹಿಂದೆ ಇದ್ದ ಹಳೆಯ ಶಾಚಾಲಯವನ್ನು ಈಗಲೂ ಪ್ರಯಾಣಿಕ ಬಳಕೆಗೆ ತೆರೆದಿಡಲಾಗಿದ್ದು ದಿನನಿತ್ಯ ನೂರಾರು ಪ್ರಯಾಣಿಕರು ತಮ್ಮ ಶೌಚ ಬಾದೆ ತೀರಿಸಿಕೊಳ್ಳಲು,ಮಲಮೂತ್ರ ವಿಸರ್ಜಿಸಲು ಇದೆ ಹಳೆಯ ಶೌಚಾಲಯಕ್ಕೆ ಬಂದು ಹೋಗುತ್ತಿರುತ್ತಾರೆ. ಈ ಶೌಚಾಲಯದಲ್ಲಿಯೇ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.