ಶಿರಸಿ : ತಾಲೂಕು ಜಾನ್ಮನೆ ವಲಯದ ಶಿರಗುಣಿ ಗ್ರಾಮದಲ್ಲಿ ಒಂದೂವರೆ ವರ್ಷದ ಗಂಡು ಚಿರತೆಯೊಂದು ಆಹಾರ ಅರಸಿ ಬಂದ ವೇಳೆ ವೇಳೆ ಖಾಸಗಿ ಜಮೀನಿನಲ್ಲಿ ಹಾಕಿದ್ದ ತಂತಿ ಬೇಲಿಗೆ ಸಿಲುಕಿದ ಒದ್ದಾಡಿದ ಘಟನೆ ನಡೆದಿದೆ. ಚಿರತೆ ಚೀರಾಟ ಭಯಾನಕವಾಗಿದ್ದಿತ್ತು ಎನ್ನಲಾಗಿದೆ. ಘಟನೆಯಿಂದಾಗಿ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಚಿರತೆಯು ಯಾರ ಮೇಲಾದರೂ ಆಗಬಹುದೆಂಬ ಭಯ ಜನತೆಯನ್ನು ಕಾಡುತ್ತಿತ್ತು.

RELATED ARTICLES  ಶಿಕ್ಷಕರು ಯಾವುದೇ ಸ್ಥಳಗಳಿಗೂ ಹೋಗಿ ಕರ್ತವ್ಯ ನಿರ್ವಹಿಸಲು ಸಿದ್ಧರಿರಬೇಕು :ಶಾಸಕ ದಿನಕರ ಶೆಟ್ಟಿ

ಸ್ಥಳೀಯರು ಇದನ್ನು ನೋಡಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಈವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಶಿವಮೊಗ್ಗ ವನ್ಯಜೀವಿ ವಲಯದ ವೈದ್ಯರ ತಂಡಕ್ಕೆ ಮಾಹಿತಿ ನೀಡಿದ್ದು ಹಲವು ಘಂಟೆಗಳ ರಕ್ಷಣೆ ಕಾರ್ಯದಲ್ಲಿ ಕೊನೆಗೂ ಚಿರತೆಯನ್ನು ಜೀವಂತ ರಕ್ಷಿಸುವಲ್ಲಿ ಸಫಲರಾಗಿದ್ದಾರೆ. ಈ ಹಿಂದೆ ಶಿರಸಿ ಭಾಗದಲ್ಲಿ ಕಪ್ಪು ಚಿರತೆಯೊಂದು ತಂತಿಗೆ ಸಿಲುಕಿದ್ದಾಗ ರಕ್ಷಣಾ ಕಾರ್ಯ ತಡವಾದ್ದರಿಂದ ಸಾವು ಕಂಡಿತ್ತು.
ಆದರೇ ಈ ಬಾರಿ ಶಿರಸಿ ಉಪ ಅರಣ್ಯ ಸೌಂರಕ್ಷಣಾಧಿಕಾರಿ ಎಸ್ .ಜಿ ಹೆಗಡೆ ನೇತ್ರತ್ವದಲ್ಲಿ ಶಿವಮೊಗ್ಗದ ವನ್ಯಜೀವಿ ವೈದ್ಯರ ಸಹಕಾರದಿಂದ ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಡಲಾಗಿದೆ.

RELATED ARTICLES  ನಾಳೆಯಿಂದ ಭಟ್ಕಳದಲ್ಲಿ ಕೊಂಚ ರಿಲೀಫ್ : ಲಾಕ್ ಡೌನ್ ಸಡಿಲಿಕೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ