ಕುಮಟಾ : ಮಕ್ಕಳಲ್ಲಿನ ಕುತೂಹಲಗಳು ಸಂಶೋಧನೆ ಪ್ರವೃತ್ತಿಯಲ್ಲಿ ತೊಡಗಿಕೊಳ್ಳಲು ವಿಜ್ಞಾನ ವಸ್ತು ಪ್ರದರ್ಶನ ಹೆಚ್ಚು ಪ್ರೇರಣೆಯನ್ನು ನೀಡುತ್ತದೆ ಎಂದು ಪ್ರಾಚಾರ್ಯರಾದ ಈಶ್ವರ ನಾಯ್ಕ ಅಭಿಪ್ರಾಯಪಟ್ಟರು. ಅವರು ಕುಮಟಾ ತಾಲೂಕಿನ ಹೆಗಡೆ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಯಲ್ಲಿ ನಡೆದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಗ್ರಾಮೀಣ ಪ್ರದೇಶದಲ್ಲಿರುವ ಹೆಗಡೆಯ ಈ ಶಾಲೆ ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ  ಜಿಲ್ಲೆಯ ಗಮನ ಸೆಳೆದಿದೆ. ರಾಷ್ಟ್ರೀಯ ವಿಜ್ಞಾನ ದಿನಾಚರಣೆ ನಿಮಿತ್ತ ವಿಜ್ಞಾನಕ್ಕೆ ಸಂಬಂಧಿಸಿದಂತೆ ಪಾಠದಲ್ಲಿರುವ ಚಿತ್ರಗಳನ್ನು ರಂಗೋಲಿ ಮೂಲಕ ಬಹಳ ಅಚ್ಚುಕಟ್ಟಾಗಿ ಮಕ್ಕಳು ರಚನೆ ಮಾಡಿದ್ದಾರೆ. ಮಾದರಿಗಳನ್ನು ಪ್ರದರ್ಶನಕ್ಕೆ ಇಡುವುದರ ಜೊತೆಗೆ ಅಷ್ಟೇ ಸಮರ್ಥವಾಗಿ ವೀಕ್ಷಕರು ಕೇಳಿದ್ದಕ್ಕೆ ವಿವರಣೆ ನೀಡುವ ಸಾಮರ್ಥ್ಯ ಕೂಡ ಹೊಂದಿದ್ದಾರೆ. ಇಂಥ ಪ್ರವೃತ್ತಿಗಳು ಭವಿಷ್ಯದಲ್ಲಿ ಮಕ್ಕಳನ್ನು ರೂಪಿಸುವಲ್ಲಿ ಸಹಕಾರಿಯಾಗುತ್ತದೆ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಆರ್. ಎಲ್. ಭಟ್ ರವರು ಮಕ್ಕಳು ರಚಿಸಿರುವಂತಹ ವೈಜ್ಞಾನಿಕ ಮಾದರಿಗಳು ಯಾವುದಕ್ಕೂ ಕಮ್ಮಿಯಿಲ್ಲ. ಯಾರಿಗೆ ಗೊತ್ತು ? ಈ ಶಾಲೆಯ ವಿದ್ಯಾರ್ಥಿಗಳಲ್ಲಿ ಭವಿಷ್ಯದಲ್ಲಿ ಯಾರಾದರೂ ವಿಜ್ಞಾನಿ ಯಾದರೆ ಅಚ್ಚರಿಯಿಲ್ಲ. ಇಂಥ ಶಾಲೆ ನಮ್ಮ ಅಧೀನದಲ್ಲಿದೆ ಎಂಬುದಕ್ಕೆ ತುಂಬಾ ಹೆಮ್ಮೆಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.

RELATED ARTICLES  ಸಿ.ಎ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿಶ್ವೇಶ್ವರ ಗೋಪಾಲ ಭಟ್ಟ

ಅತಿಥಿ ಗಳಾಗಿ ಆಗಮಿಸಿದ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ರೇಖಾ ನಾಯ್ಕ ಹೊಸ ಹೊಸ ಕಾರ್ಯ ಚಟುವಟಿಕೆ ಮೂಲಕ ಇತರ ಶಾಲೆಗಳಿಗಿಂತ ಭಿನ್ನವಾಗಿ ನಿಲ್ಲುವ ಈ ಶಾಲೆ ತಂತ್ರಜ್ಞಾನ ಅಳವಡಿಸಿಕೊಳ್ಳುವಲ್ಲೂ ಬಹಳ ಮುಂದಿದೆ. ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಸಂದರ್ಭದಲ್ಲಿ ಮಕ್ಕಳಲ್ಲಿ ವೈಜ್ಞಾನಿಕತೆಯ ಮೂಡಿಸುವ ನಿಟ್ಟಿನಲ್ಲಿ ಹಮ್ಮಿಕೊಂಡ ವಿಜ್ಞಾನ ವಸ್ತು ಪ್ರದರ್ಶನ ಮತ್ತು ವಿಜ್ಞಾನದ ಚಿತ್ರಗಳು ಮಕ್ಕಳಲ್ಲಿನ ಸೃಜನಾತ್ಮಕತೆ ಹೊರಹಾಕಲು ಶಿಕ್ಷಕರು ನೀಡಿದ ಪ್ರೇರಣೆ ಎಂದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಎಸ್ಡಿಎಂಸಿ ಅಧ್ಯಕ್ಷ ಪ್ರಕಾಶ ನಾಯ್ಕ ನಮ್ಮ ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳು ಬಗ್ಗೆ ಬಳಷ್ಟು ಮುತುವರ್ಜಿವಹಿಸಿ ಕಲಿಕೆ ಪರಿಣಾಮ ಕಾರಿ ಯಾಗು ವಂತೆ ಮಾಡುತ್ತಿದ್ದಾರೆ. ಈ ದಿನ ಕೂಡ ಮಕ್ಕಳ ಪ್ರೋತ್ಸಾಹಿಸಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ಅಭಿನಂದನೀಯ ಎಂದರು.

RELATED ARTICLES  ಶಿಕ್ಷಣ ಸಾರಥಿ ಪ್ರಶಸ್ತಿಗೆ ಭಾಸ್ಕರ ಮಡಿವಾಳ ಆಯ್ಕೆ.

ವೇದಿಕೆಯಲ್ಲಿ ಎಸ್ಡಿಎಂಸಿ ಉಪಾಧ್ಯಕ್ಷೆ ಯೋಗಿತ ನಾಯ್ಕ,  ಬಿ. ಆರ್. ಪಿ. ಚೂಡಾಮಣಿ ಪಟಗಾರ, ಸಿ. ಆರ್. ಪಿ. ಲಿಂಗಪ್ಪ ಪಟಗಾರ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಇನ್ಸ್ಪೈರ್ ಅವಾರ್ಡ್ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ರಾಷ್ಟ್ರ ಮಟ್ಟದಲ್ಲಿ ಪ್ರದರ್ಶನ ನೀಡಿದ ಈ ಶಾಲೆಯ ವಿದ್ಯಾರ್ಥಿ ಕುಮಾರಿ ರೇವತಿ ಮುಕ್ರಿ ಯನ್ನು ಗಣ್ಯರು ಗೌರವಿಸಿದರು. ಇಕೋ ಕ್ಲಬ್ ನಿಂದ ನಡೆಸಿದ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿನಿಯರಿಗೆ ಬಹುಮಾನ ನೀಡಲಾಯಿತು.

ಪ್ರಭಾರಿ ಮುಖ್ಯ ಅಧ್ಯಾಪಕಿ ಮಂಗಲ ಹೆಬ್ಬಾರ್ ಸರ್ವರನ್ನು ಸ್ವಾಗತಿಸಿದರು. ವಿಜ್ಞಾನ ಶಿಕ್ಷಕ ಶ್ರೀಧರ ಗೌಡ ಪ್ರಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ನಾಗರಾಜ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಶಾಮಲಾ ಪಟಗಾರ್ ವಂದನಾರ್ಪಣೆ ಮಾಡಿದರು. ಶಿಕ್ಷಕಿ ರೇಣುಕಾ ನಾಯ್ಕ  ಮತ್ತು ನಯನಾ ಪಟಗಾರ ಸಹಕರಿಸಿದರು.