ಜೋಯ್ಡಾ : ಛತ್ತಿಸಘಡ ರಾಜ್ಯದ ತ್ರಿಮೂರ್ತಿ ಕಾಲೋನಿಯ ನಿವಾಸಿ, 25 ವರ್ಷ ವಯಸ್ಸಿನ ಮೆಡಿಕ್ ವಿದ್ಯಾರ್ಥಿನಿ ದೇವಿಕಾ ಪ್ರವಾಸಕ್ಕೆ ಬಂದಿದ್ದ ವೇಳೆ ಅವಘಡವೊಂದರಲ್ಲಿ ಕೊನೆಯುಸಿರೆಳೆದಿದ್ದಾಳೆ. ಸೈಕ್ಲಿಂಗ್‌ಗೆ ತೆರಳಿದ್ದ ವೇಳೆ ಅತಿವೇಗದ ಚಾಲನೆಯಿಂದಾಗಿ ನಿಯಂತ್ರಣ ತಪ್ಪಿ ಮರವೊಂದಕ್ಕೆ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡು ಸಾವನ್ನಪ್ಪಿದ ಘಟನೆ ಜೊಯಿಡಾ ತಾಲೂಕಿನ ಅಕೋರ್ಡಾ ಎಂಬಲ್ಲಿ ನಡೆದಿದೆ. ಅಪಘಾತದಿಂದ ತಲೆಗೆ ಗಂಭೀರ ಗಾಯವಾಗಿದೆ. ಗಾಯಗೊಂಡ ದೇವಿಕಾ ವಾಸವಾಣಿ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ.
ಈಕೆ ಸ್ನೇಹಿತರ ಜೊತೆಗೆ ಜೊಯಿಡಾ ತಾಲ್ಲೂಕಿಗೆ ಪ್ರವಾಸಕ್ಕೆಂದು ಬಂದಿದ್ದಳು. ಈ ವೇಳೆ ತಾಲೂಕಿನ ಬಿರಂಪಾಲಿ ಗ್ರಾಮದ ಹಿಡನ್‌ವ್ಯಾಲಿ ಹೋಂ ಸ್ಟೇಯ ಸೈಕಲನ್ನು ತೆಗೆದುಕೊಂಡು ಸೈಕ್ಲಿಂಗ್ ಮಾಡುತ್ತಾ ಅಕೋರ್ಡಾ ಗ್ರಾಮದ ಕಡೆಗೆ ಹೋಗುತ್ತಿರುವಾಗ ನಿಯಂತ್ರಣ ತಪ್ಪಿ ಸೈಕಲ್ ಸ್ಕಿಡ್ ಆಗಿ ಮರವೊಂದಕ್ಕೆ ಡಿಕ್ಕಿ ಹೊಡೆದಿದ ಎನ್ನಲಾಗಿದೆ. ಈ ಬಗ್ಗೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಸಿ, ಶವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.