ಕಾರವಾರ : ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿರವರ ಚೊಚ್ಚಲ ಬಜೆಟ್ ನಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಹೆಚ್ಚು ಕೊಡುಗೆ ನೀಡಿದ್ದು, ಏನೆಲ್ಲಾ ಕೊಡುಗೆಗಳನ್ನು ನೀಡಿದೆ ಎಂಬ ವಿವರ ಇಲ್ಲಿದೆ. ಜಿಲ್ಲೆಯ ಪ್ರವಾಸೋಧ್ಯಮ ಕ್ಕೆ ಹೆಚ್ಚು ಒತ್ತು ನೀಡುವ ಸಲವಾಗಿ CRZ ಮಾನದಂಡ ಸಡಿಲಿಸಲು ಕೇಂದ್ರಸರ್ಕಾರಕ್ಕೆ ಮನವರಿಕೆ ಮಾಡಿಸಿ ಅನುಮೋದನೆ ಪಡೆಯಲು ಯತ್ನವನ್ನು ಈ ಬಜೆಟ್ ನಲ್ಲಿ ಮಾಡಲಾಗಿದೆ. ತದಡಿ ಬಂದರಿನಲ್ಲಿ ಸಮಗ್ರ ಪರಿಸರ ಪ್ರವಾಸೋಧ್ಯಮ ಕೇಂದ್ರ ಅಭಿವೃದ್ಧಿ. ಆಳ ಸಮುದ್ರದ ಮೀನುಗಾರಿಕೆ ಉತ್ತೇಜನಕ್ಕೆ ಪ್ರಧಾನಮಂತ್ರಿ ಮತ್ಸ್ಯ ಸಂಪದ ಸಂಯೋಜನೆಯೊಂದಿಗೆ 100 ಆಳ ಸಮುದ್ರ ಮಿನುಗಾರಿಕೆ ಹಡಗುಗಳಿಗೆ ನೆರವು ನೀಡಲು ಮತ್ಸ್ಯ ಸಿರಿ ಯೋಜನೆ .ಒಂದು ನಾರಾಯಣಗುರು ವಸತಿ ಶಾಲೆ ಪ್ರಾರಂಭ . ಸಾಗರಮಾಲಾ ಯೋಜನೆಯಡಿ 1880 ಕೋಟಿ ವೆಚ್ಚದಲ್ಲಿ 24 ಯೋಜನೆ ಅನುಷ್ಟಾನ ಹಾಗೂ ಕಾರವಾರ ಬಂದರು ವಿಸ್ತರಣೆ. ಮಾಜಾಳಿಯಲ್ಲಿ ಪ್ರಧಾನಮಂತ್ರಿ ಮತ್ಯ್ಯ ಸಂಪದ ಯೋಜನೆಯಡಿ 250 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಬಂದರು ನಿರ್ಮಾಣ. ಬೇಲಿಕೇರಿ-ಕೇಣಿಯಲ್ಲಿ ಗ್ರೀನ್ ಫೀಲ್ಡ್ ಬಂದರು ಅಭಿವೃದ್ಧಿ ಮುಂತಾದ ಯೋಜನೆಗಳಿದೆ.

RELATED ARTICLES  ಗೂಂಡಾಗಿರಿ ಎನ್ನುವುದು ಎಲ್ಲಿಯೂ ತಲೆಎತ್ತದಂತೆ ತಡೆದಿದ್ದೇನೆ : ದಿನಕರ ಶೆಟ್ಟಿ.

ಕಾರವಾರದಲ್ಲಿ ರಾಜ್ಯದ ಮೊದಲ ಜಲಸಾರಿಗೆ ಮತ್ತು ಮೀನುಗಾರಿಕೆ ತರಬೇತಿ ಸಂಸ್ಥೆ ಸ್ಥಾಪನೆ. ಕರಾವಳಿ ಭಾಗದ ಜಲಮೂಲಗಳಲ್ಲಿ ಪ್ಲಾಸ್ಟಿಕ್ ಮಾಲಿನ್ಯ ನಿವಾರಿಸಲು 840 ಕೋಟಿ. ಗೋವಾದಲ್ಲಿ ಕನ್ನಡ ಭವನ ನಿರ್ಮಾಣ. ಕಾಳೀ ನದಿಯಿಂದ ನೀರನ್ನು ಬಳಸಿಕೊಂಡು ಉತ್ತರ ಕರ್ನಾಟಕದ ಐದು ಜಿಲ್ಲೆಗಳಿಗೆ ಕುಡಿಯುವ ನೀರು ಯೋಜನೆ ರೂಪಿಸುವ ಘೋಷಣೆ ಮಾಡಲಾಗಿದ್ದು ಈ ಘೋಷಣೆ ಉತ್ತರಕನ್ನಡಿಗರಿಗೆ ಸಂತಸದ ಬಜೆಟ್ ಎನ್ನಲಾಗುತ್ತಿದೆ.

RELATED ARTICLES  ಕ್ರೀಡೆಗಳ ಮೂಲಕ ಹಮ್ಮಿಕೊಂಡ ಸಮಾಜಮುಖಿ ಕೆಲಸ ಶ್ಲಾಘನೀಯ.- ನಾಗರಾಜ ನಾಯಕ ತೊರ್ಕೆ.