ಬೆಂಗಳೂರು: ರಾಜ್ಯದಲ್ಲಿ ತಿಂಗಳಿಂದ ಇದ್ದ ಒಣಹವೆ ತಗ್ಗಿದೆ. ಇಂದಿನಿಂದ ಉತ್ತರಕನ್ನಡವೂ ಸೇರಿದಂತೆ ರಾಜ್ಯದ ವಿವಿಧೆಡೆ ಮಳೆಯಾಗುವ ಸಾಧ್ಯತೆ ಇದೆ. ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ತೀವ್ರ ವಾಯುಭಾರ ಕುಸಿತದಿಂದಾಗಿ ರಾಜ್ಯದ ಒಳ ಮತ್ತು ಕರಾವಳಿ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಮಾರ್ಚ್ 7 ರಂದು ಕೋಲಾರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಕೊಡಗು ಮತ್ತು ಹಾಸನದಲ್ಲಿ ಗುಡುಗು ಸಹಿತ ಮಳೆ ಸುರಿಯುವ ಸಾಧ್ಯತೆ ಇದೆ. ಪಶ್ಚಿಮ ಘಟ್ಟದ ಪ್ರಸ್ಥಭೂಮಿಯಲ್ಲಿರುವ ಜಿಲ್ಲೆಗಳಲ್ಲಿ ಮಾರ್ಚ್ 9 ರವರೆಗೆ ಮಳೆ ಮುಂದುವರೆಯಲಿದೆ.
ಮಾರ್ಚ್ 8 ರಂದು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಳಗಾವಿ, ಗದಗ, ಧಾರವಾಡ ಮತ್ತು ಹಾವೇರಿಯಲ್ಲಿ ಮಳೆಯಾಗಲಿದೆ. ಬೆಂಗಳೂರಿನಲ್ಲಿ ಕೆಲವು
ದಿನಗಳವರೆಗೆ ಬಲವಾದ ಮೇಲೆ ಗಾಳಿ ಬೀಸುತ್ತದೆ. ಬೆಳಿಗ್ಗೆ ಮಂಜು ಇರುತ್ತದೆ. ಗರಿಷ್ಠ ತಾಪಮಾನವು 32 ಡಿಗ್ರಿ ಸೆಲ್ಸಿಯಸ್ ಆಗಿರುತ್ತದೆ. ಪ್ರಸ್ತುತ ಬಂಗಾಳಕೊಲ್ಲಿಯಲ್ಲಿ ಚೆನ್ನೈನಿಂದ
ಸುಮಾರು 300 ಕಿ.ಮೀ ದೂರದಲ್ಲಿ ವಾಯುಭಾರ ಕುಸಿತ ಉಂಟಾಗಿದೆ. ನಂತರ ತಮಿಳುನಾಡಿನ ಉತ್ತರ ಕರಾವಳಿಯನ್ನು ತಲುಪಲಿದೆ. ಕರ್ನಾಟಕದಲ್ಲಿ ಮೇ ಅಂತ್ಯದವರೆಗೆ
ಮುಂಗಾರು ಪೂರ್ವ ಮಳೆಯಾಗುವ ಸಾಧ್ಯತೆ ಇದೆ.