ಹೊನ್ನಾವರ : ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಹೊನ್ನಾವರ ಭಾಗಕ್ಕೆ ಈ ಬಾರಿಯ ಆಯ-ವ್ಯಯ ಪತ್ರದಲ್ಲಿ ರಾಜ್ಯದ ಬಿ.ಜೆ.ಪಿ ಸರಕಾರ ವಿಶೇಷ ಯೋಜನೆಗಳನ್ನು ಕೈಗೆತ್ತಿಕೊಳ್ಳಬಹುದೆಂಬ ಜನರ ನಿರೀಕ್ಷೆ ಹುಸಿಯಾಗಿದೆ ಎಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ಎನ್. ತೆಂಗೇರಿ ನುಡಿದಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅತ್ಯದಿಕ ಬಹುಮತಗಳಿಂದ ಈ ಭಾಗದ ಜನ ಬಿ.ಜೆ.ಪಿ.ಯನ್ನು ಬೆಂಬಲಿಸಿದ್ದರೂ ಕೂಡ, ಈ ಹಿಂದಿನ ಬಜೆಟ್‌ನಂತೆ ಈ ಬಾರಿಯ ಆಯ-ವ್ಯಯ ಪತ್ರದಲ್ಲೂ , ಯಾವುದೇ ವಿಶೇಷ ಕೊಡುಗೆಗಳನ್ನು ನೀಡದೇ, ಪ್ರಯೋಜನಕ್ಕೆ ಬಾರದ ಬಜೆಟ್ ಮಂಡಿಸಿದ್ದಾರೆ ಎಂದು ಅವರು ಟೀಕಿಸಿದರು. ನಮ್ಮ ಭಾಗದಲ್ಲಿ ದಿನನಿತ್ಯ ರಸ್ತೆ ಅಪಘಾತಗಳು ಹೆಚ್ಚುತ್ತಿದ್ದು, ಗಾಯಾಳುಗಳು ದೂರದ ಮಂಗಳೂರಿಗೆ ಚಿಕಿತ್ಸೆಗೆ ತೆರಳುವ ಮಾರ್ಗದ ಮಧ್ಯದಲ್ಲಿಯೇ ಅಸುನೀಗುತ್ತಿರುವುದು ಎಲ್ಲರಿಗೂ ತಿಳಿದ ವಿಷಯ. ಕಾರಣ ಈ ಬಜೆಟ್‌ನಲ್ಲಾದರೂ ನಮ್ಮ ಭಾಗಕ್ಕೆ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆ ಮಂಜೂರಾಗುವ ಕನಸು ಭಗ್ನವಾಗಿದ್ದು, ಕೊನೆ ಪಕ್ಷ ಟ್ರಾಮಾಸೆಂಟರ್ ತರುವುದರಲ್ಲೂ ಈ ಭಾಗದ ಶಾಸಕ ದಿನಕರ ಶೆಟ್ಟಿ ವಿಫಲರಾಗಿದ್ದಾರೆಂದು ಆಪಾದಿಸಿದರು.

RELATED ARTICLES  ಉತ್ತಮ ಗುಣ ಮಟ್ಟದ ಆಹಾರಕ್ಕಾಗಿ ಸಾವಯವ ಕೃಷಿ ಅಗತ್ಯ : ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ

ಮಳೆಗಾಲದಲ್ಲಿ ನಮ್ಮ ಭಾಗದಲ್ಲಿ ಪದೇ ಪದೇ ನೆರೆಹಾವಳಿ ಸಂಭವಿಸುತ್ತಿದ್ದು, ಅಂತಹ ಸಂದರ್ಭದಲ್ಲಿ ನೇರೆಪೀಡಿತ
ಜನರು ಆಶ್ರಯ ಪಡಬಹುದಾದಂತಹ ಶಾಶ್ವತ ಯೋಜನೆಗಳನ್ನು ಜಾರಿಯಲ್ಲಿ ತರಬಹುದಿತ್ತು. ಹೊನ್ನಾವರ ಬಸ್ ನಿಲ್ದಾಣ ನವೀಕರಿಸುವ ಕಾರ್ಯ ಪ್ರಗತಿಯಲ್ಲಿದ್ದರೂ, ತೀರಾ ಅವಶ್ಯಕವಿರುವ ಬಸ್ ಡಿಪೋ ಇವತ್ತಿಗೂ ಮರಿಚಿಕೆಯಾಗಿದೆ ಎಂದರು. ಜಿಲ್ಲೆಯ ಎಲ್ಲಾ ಮಿನಿ ವಿಧಾನಸೌಧ ಎರಡು ಮೂರು ಅಂತಸ್ತುಗಳನ್ನು ಹೊಂದಿದ್ದರೂ, ಹೊನ್ನಾವರದ ಮಿನಿ ವಿಧಾನಸೌಧ ಯಾವುದೇ ಮಹಡಿಯಿಲ್ಲದೇ ಇನ್ನೂ ಹಲವಾರು ಇಲಾಖೆಗಳ ಕಛೇರಿಗೆ ಅವಕಾಶವಿಲ್ಲದೇ, ಬಾಡಿಗೆ ಕಟ್ಟಡದಲ್ಲಿ ನಡೆಸುತ್ತಿರುವುದು ಈ ಭಾಗದ ಜನರ ದುರ್ದೈವ ಎಂದಿದ್ದಾರೆ. ಹೊನ್ನಾವರ ಭಾಗದಲ್ಲಿ ಕೇವಲ ಶರಾವತಿ ಕುಡಿಯುವ ನೀರಿನ ಯೋಜನೆಯ ಕಾಮಗಾರಿಯು ಕಣ್ಣಿಗೆ ಕಾಣುತ್ತಿದ್ದು, ಅದು ಕೂಡ ಹಿಂದಿನ ಸಿದ್ಧರಾಮಯ್ಯ ಸರ್ಕಾರದ ಕಾಲಾವಧಿಯಲ್ಲಿ ಅಂದೀನ ಶಾಸಕಿ ಶ್ರೀಮತಿ ಶಾರದಾ ಶೆಟ್ಟಿ ಮಂಜೂರಿ ಪಡಿಸಿದ ಕಾಮಗಾರಿಕೆಯಾಗಿದೆ ಎಂದರು. ಹೊನ್ನಾವರ ನಗರದ ಸಾರ್ವಜನಿಕ ಹಿತದೃಷ್ಟಿಯಿಂದ ಮೇಲು ಸೇತುವೆ ತೀರಾ ಅಗತ್ಯವಿದ್ದು, ರಾಜ್ಯ ಸರಕಾರ ಭೂಮಿ ನೀಡಿದ್ದಲ್ಲಿ ಮೇಲು ಸೇತುವೆ ಮಂಜೂರಿ ಪಡಿಸುವುದಾಗಿ ಭರವಸೆ ನೀಡಿದ ಸಂಸದ ಅನಂತಕುಮಾರ ಹೆಗಡೆಯವರ ಮಾತು ಹುಸಿಯಾಗಿದೆ ಎಂದರು. ಒಟ್ಟಾರೆ ಈ ಭಾರಿಯ ಬಜೆಟ್ ಹೊನ್ನಾವರಕ್ಕೆ ನಿರಾಶಾದಾಯಕ ಎಂದರು.

RELATED ARTICLES  ಬೆಡ್ ರೂಂಮ್ ನಲ್ಲಿಯೇ ನೇಣಿಗೆ ಶರಣಾದ ಮಹಿಳೆ