ಸಧ್ಯದಲ್ಲಿಯೇ ಕರ್ನಾಟಕ ಸರಕಾರ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ನೇಮಕಾತಿಗೆ ಅರ್ಜಿಯನ್ನು ಆಹ್ವಾನಿಸಲಿದ್ದು . ಅಭ್ಯರ್ಥಿಗಳಿಗೆ ಆಯ್ಕೆಗೆ ಸಂಬಂಧಿಸಿದಂತೆ ಪರೀಕ್ಷೆಯನ್ನು ನೆಡೆಸಲಿದೆ ಈ ಪರೀಕ್ಷೆಯಲ್ಲಿನ ಪತ್ರಿಕೆ-೨ ಐಚ್ಛಿಕ ವಿಷಯದಲ್ಲಿ 50 ಅಂಕದ ಬಹುಆಯ್ಕೆ ಹಾಗೂ 100 ಅಂಕದ ದೀರ್ಘ ಉತ್ತರದ ಪ್ರಶ್ನೆಗಳನ್ನು ಕೇಳಲಾಗುತ್ತದೆ.ಬಹುಅಂಶ ಆಯ್ಕೆಯ 50 ಅಂಕದ ಪರೀಕ್ಷೆಗೆ ಒಂದು ತಾಸಿನ ಅವಧಿ ನೀಡಿದರೆ 100 ವಿವರಣಾತ್ಮಕ ಪರೀಕ್ಷೆಗೆ ಕೇವಲ ಎರಡೇ ತಾಸಿನ ಅವಧಿಯನ್ನು ನೀಡಲಾಗುತ್ತಿದೆ.ಪ್ರಸಕಸಾಲಿನ ಆಯ್ಕೆ ಪ್ರಕ್ರಿಯೆಯ ಪರೀಕ್ಷೆಯಲ್ಲಿ ಪತ್ರಿಕೆ -೨ ಕ್ಕೆ ಉತ್ತರಿಸಲು ಹೆಚ್ಚಿನ ಸಮಯ ನೀಡುವಂತೆ ಮಾಧ್ಯಮಿಕ ಶಿಕ್ಷಕರ ಸಂಘದ ಸದಸ್ಯರು ಹಾಗೂ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಕಾಗಾಲ ಚಿದಾನಂದ ಭಂಡಾರಿ ಶಿಕ್ಷಣ ಮಂತ್ರಿಗಳಾದ ಬಿ ನಾಗೇಶ ಅವರಲ್ಲಿ ಪತ್ರದ ಮೂಲಕ ಮನವಿಮಾಡಿಕೊಂಡಿದ್ದಾರೆ.ಈ ಸಂಬಂಧ ಸರಕಾರದ ಮನ ಒಲಿಸುವಂತೆ ವಿಧಾನಪರಿಷತ್ ಸದಸ್ಯರಾದ ಎಸ್ ವಿ ಸಂಕನೂರು ಹಾಗೂ ಅರುಣ ಷಹಾಪೂರ ಅವರಲ್ಲಿಯೂ ವಿನಂತಿಸಿಕೊಂಡಿದ್ದಾರೆ.

RELATED ARTICLES  ಅಕ್ರಮ ಗಾಂಜಾ ಮಾರಾಟ : ಓರ್ವನ ಬಂಧನ