ಕುಮಟಾ: ತಾಲೂಕಿನ ಕೋಡ್ಕಣಿಯ ವ್ಯಕ್ತಿಯೊಬ್ಬ  ಪಟ್ಟಣಕ್ಕೆ ಹೋಗಿ ಬರುವುದಾಗಿ ಹೇಳಿ ಹೋದವನು ನಾಪತ್ತೆಯಾದ ಬಗ್ಗೆ ದೂರು ದಾಖಲಾಗಿದ್ದು, ಕುಟುಂಬಸ್ತರು ಹಾಗೂ ಪೊಲೀಸರು ವ್ಯಕ್ತಿಯ ಪತ್ತೆಗಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ನಾಪತ್ತೆಯಾದ ವ್ಯಕ್ತಿಯನ್ನು ಕಾಶಿನಾಥ ನಾಗಪ್ಪ ವೆರ್ಣೆಕರ್ ಎಂದು ಗುರುತಿಸಲಾಗಿದೆ.

RELATED ARTICLES  ಜಿಲ್ಲಾ ಮಟ್ಟದ ಭಗವದ್ಗೀತೆ ಸ್ಪರ್ಧೆ ; ಕೊಂಕಣ ವಿದ್ಯಾರ್ಥಿಗಳ ಸಾಧನೆ

ಬೆಳ್ಳಿ ಬಂಗಾರದ ಕೆಲಸ ಮಾಡಿಕೊಂಡಿದ್ದ ಈತ ಕುಮಟಾ ಪಟ್ಟಣಕ್ಕೆ ಹೋಗಿ ಬರುವುದಾಗಿ ಹೇಳಿ ಹೋದವನು ವಾಪಸ್ ಬಂದಿಲ್ಲ. ಈತ ಮನೆಗೂ ಬಂದಿಲ್ಲವಾಗಿದ್ದು, ಅತ್ತ ಸಂಬoಧಿಕರ ಮನೆಗೂ ತೆರಳಿದ ಕುರಿತು ಮಾಹಿತಿ ಇಲ್ಲ. ಹೀಗಾಗಿ ಕುಟುಂಬದವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈತ ಪತ್ತೆಯಾದಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಕೋರಲಾಗಿದೆ.
ಅಥವಾ  9480805234 PI KUMTA ಹಾಗೂ 9480805272 PSI KUMTA , 7892465686 Krishnanand Naik ಇವರಿಗೆ ತಿಳಿಸಲು ಕೋರಲಾಗಿದೆ.

RELATED ARTICLES  ಭಟ್ಕಳ ಕಸಾಪದಿಂದ ಪರಿಷತ್ತಿನ ಮಾಜಿ ಅಧ್ಯಕ್ಷ ಕೆ.ಎನ್.ನಾಯ್ಕ ಅವರಿಗೆ ಸನ್ಮಾನ.