ಕುಮಟಾ : ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಇಲ್ಲಿಯ ರೋಟರಿ ಕ್ಲಬ್ ರೋಟರಿಯ ನಾದಶ್ರೀ ಕಲಾಕೇಂದ್ರದಲ್ಲಿ ಒಂದು ದಿನದ ಮಹಿಳಾ ಉದ್ಯಮಶೀಲತಾ ಕಾರ್ಯಾಗಾರವನ್ನು ಹಮ್ಮಿಕೊಂಡಿತ್ತು. ಕಾರ್ಯಾಗಾರನ್ನು ಉದ್ಘಾಟಿಸಿ ಮಾತನಾಡಿದ ತಾಲ್ಲೂಕಾ ಆರೋಗ್ಯಾಧಿಕಾರಿ ಡಾ. ಆಜ್ಞಾ ನಾಯಕ ಮಾತನಾಡಿ ಆಧುನಿಕ ಮಹಿಳೆಯರಿಗೆ ಅತ್ಯುಪಯುಕ್ತವಾದ ಉದ್ಯೋಗ ಹಾಗೂ ಆರ್ಥಿಕತೆಯ ಬಗ್ಗೆ ಅರಿವಿನ ಕಾರ್ಯಾಗಾರವನ್ನು ರೋಟರಿ ಸಂಸ್ಥೆ ಏರ್ಪಡಿಸುತ್ತಿರುವುದಕ್ಕೆ ಅಭಿನಂದಿಸಿದರು. ಕಾರ್ಯಾಗಾರದ ಸದುಪಯೋಗವನ್ನು ಶಿಬಿರಾರ್ಥಿಗಳು ಪಡೆದುಕೊಳ್ಳಬೇಕೆಂದು ಕೋರಿದರು. ನಡವಳಿಕೆ ತರಬೇತುದಾರರಾದ ರೋ.ಪ್ರೀತಮ್ ಕಾಮತ್, ಹಣಕಾಸು ನಿರ್ವಹಣೆಯ ಕುರಿತು ಸಪ್ನಾ ಶೇಣ್ವಿ, ಸಾಫ್ಟ್ ಸ್ಕಿಲ್ಸ್ ಬಗ್ಗೆ ಶಾನ್ ನೀನೆಂಬ ಅನನ್ಯತೆಯ ಕುರಿತು ಕೌಶಲ್ಯ ತಜ್ಞೆ ಪ್ರೀತಿ ನಾಯ್ಕ ಮಂಗಳೂರು ತರಬೇತಿ ನಡೆಸಿಕೊಟ್ಟರು.
ಸಿಡಿಪಿಒ ನಾಗರತ್ನಾ ನಾಯಕ, ರ‍್ಸೆಟಿ ನಿರ್ದೇಶಕ ರವಿ ಜಿ. ನಾಯ್ಕ, ಕರ್ನಾಟಕ ವಿಕಾಸ ಬ್ಯಾಂಕಿನ ಪ್ರಾದೇಶಿಕ ಅಧಿಕಾರಿ ಎ.ಪ್ರಕಾಶ, ರೆಸಿಟಿಯ ಗೌರೀಶ ನಾಯ್ಕ, ಮಮತಾ ನಾಯ್ಕ, ಎನ್.ಆರ್.ಎಲ್.ಎಂ. ಕ್ಲಬ್‌ನ ಶೃತಿ ಮೊದಲಾದವರು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ರೋಟರಿ ಅಧ್ಯಕ್ಷೆ ಡಾ.ನಮೃತಾ ನಾಯಕ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ನಿರ್ವಹಣೆಯನ್ನು ಡಾ.ಶ್ರೀದೇವಿ ಭಟ್ ಹಾಗೂ ನಿರೂಪಣೆಯನ್ನು ಸುಜಾತಾ ಶಾನಭಾಗ ಮಾಡಿದರು. ಮೇಲುಸ್ತುವಾರಿಯನ್ನು ರೋಟರಿಯ ಸದಸ್ಯರಾದ ಅರುಣ ಉಭಯಕರ, ಎಂ.ಬಿ.ಪೈ, ಡಾ.ನಿತೀಶ್ ಶಾನಭಾಗ, ದೀಪಾ ನಾಯಕ ಮೊದಲಾದವರು ನೋಡಿಕೊಂಡರು. ಕಾರ್ಯದರ್ಶಿ ಶಿಲ್ಪಾ ಜಿನರಾಜ್ ವಂದಿಸಿದರು.