ಕಾರವಾರ : ತಾಲೂಕಿನ ನಗರದ ನಿರ್ಮಲ ಕಾನ್ವೆಂಟ್ ಶಾಲೆಯಲ್ಲಿ ಇಂದು ಶಾಲೆಯ ಕಟ್ಟಡ ಮೇಲ್ಚಾವಣಿ ಪದರ ಕುಸಿದು ಐದು ಜನ ವಿದ್ಯಾರ್ಥಿಗಳಿಗೆ ಗಂಭೀರ ಗಾಯವಾದ ಘಟನೆ ನಡೆದಿದೆ. ನಿರ್ಮಲ ಕಾನ್ವೆಂಟ್ ಶಾಲೆಯ ನಾಲ್ಕನೇ ತರಗತಿ ಕೊಠಡಿಯಲ್ಲಿ ಮೇಲ್ಚಾವಣಿಯ ಪದರ ಕುಸಿದಿದ್ದು ಈ ಸಂದರ್ಭದಲ್ಲಿ ಪಾಠ ಕೇಳುತಿದ್ದ ಮೂರು ಜನ ವಿದ್ಯಾರ್ಥಿಗಳಿಗೆ ಗಂಭೀರ ಗಾಯವಾಗಿದ್ದು ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಗೊಂಡ ವಿದ್ಯಾರ್ಥಿಗಳನ್ನು ಅಂಕೋಲಾ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಸ್ಥಳಕ್ಕೆ ಅಂಕೋಲದ ಬಿಇಓ ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.
ಕೆಲ ಮಕ್ಕಳು ಇದರಿಂದ ಕಂಗಾಲಾಗಿ ಓಮ್ಮೇಲೆ ಓಡಿ ಹೋಗುವ ಪ್ರಯತ್ನ ಮಾಡಿದರೆ, ತಮ್ಮ ತಲೆ – ಮೈ ಮೇಲೆ ಬಿದ್ದ ಕಾಂಕ್ರೀಟ್ ತುಂಡುಗಳಿಂದ ಆದ ಗಾಯಗಳನ್ನು ಲೆಕ್ಕಿಸದೇ , ಓಡಿ ಬಂದರು.
ಈ ಘಟನೆ ಕ್ಲಾಸರೂಂನ ಹಿಂಬಂದಿ ಭಾಗದಲ್ಲಿಯೇ ಆಗಿದ್ದು, ಮುಂಬದಿ ಆಗಿದ್ದರೂ ಇನ್ನಷ್ಟು ತೊಡಕಾಗುತ್ತಿತ್ತು ಎನ್ನಲಾಗಿದೆ. ಸ್ಟ್ಯಾಬನ ಭಾರವಾದ ಕಾಂಕ್ರೀಟ್ ಪದರ ಕುಸಿದು ಬಿದ್ದ ಪರಿಣಾಮ ಕೆಲ ವಿದ್ಯಾರ್ಥಿಗಳಿಗೆ ತಲೆ, ಮೈ ಕೈ ಗಳಿಗೆ ಪೆಟ್ಟಾಗಿದೆ. ಕ್ಲಾಸ್ ರೂಂ ನ ಡೆಸ್ಕ್ ಸಹ ಮುರಿದು ಇಲ್ಲಿಯ ಪರಿಸ್ಥಿತಿ ಸಾರಿ ಹೇಳುವಂತಿದೆ. ವಿಷಯ ತಿಳಿಯುತ್ತಿದ್ದಂತೆ ತಹಶೀಲ್ದಾರ ಉದಯ ಕುಂಬಾರ, ಪಿಎಸೈ ಪ್ರವೀಣ ಕುಮಾರ, ತಾಲೂಕಾ ಪಂಚಾಯತ ಇ ಓ ಪಿವೈ ಸಾವಂತ ಮತ್ತಿತರ ಅಧಿಕಾರಿಗಳು ಶಾಲೆಗೆ ಬಂದು ಸ್ಥಳ ಪರಿಶೀಲಿಸಿದರು ಮತ್ತು ಆಸ್ಪತ್ರೆಗೆ ತೆರಳಿ ವಿದ್ಯಾರ್ಥಿಗಳ ಆರೋಗ್ಯ ಮಾಹಿತಿ ಪಡೆದು, ಮಕ್ಕಳನ್ನು ಸಂತೈಸಿ , ವಿದ್ಯಾರ್ಥಿ ಪಾಲಕರಿಗೂ ಧೈರ್ಯ ತುಂಬಿದರು.