ಹೊನ್ನಾವರ: ಪಂಜಾಬ್ ಮತ್ತು ದೆಹಲಿ ನ್ಯಾಯಾಲಯಗಳ ಆವರಣದಲ್ಲಿ ಬಾಂಬ್ ವಿದ್ವಂಸಕ ಕೃತ್ಯ ನಡೆದ ಹಿನ್ನಲೆಯಲ್ಲಿ ಮುಂಜಾಗೃತ ಕ್ರಮವಾಗಿ ಜಿಲ್ಲಾ ಬಾಂಬ್ ಪತ್ತೆ ದಳದ ತಂಡವು ಸರ್ಕಾರದ ಆದೇಶದ ಪ್ರಕಾರ ಹೊನ್ನಾವರದ ನ್ಯಾಯಾಲಯ ಸಂಕೀರ್ಣವನ್ನು ತರಬೇತಿ ಪಡೆದ ಶ್ವಾನ ಬೆಳ್ಳಿಯೊಂದಿಗೆ ಗುರುವಾರ ಭೇಟಿ ನೀಡಿ ಶೋಧನಾ ಕಾರ್ಯ ನಡೆಸಿತು.

RELATED ARTICLES  600 ಕುಟುಂಬಗಳಿಗೆ ಮಾಜಿ ಶಾಸಕ ಮಂಕಾಳ ವೈದ್ಯರಿಂದ ದಿನಸಿ ಸಾಮಾಗ್ರಿಗಳ ಕಿಟ್ ವಿತರಣೆ

ತಂಡದಲ್ಲಿದ್ದ ತರಬೇತಿ ಪಡೆದ ಶ್ವಾನ ಬೆಳ್ಳಿಯೊಂದಿಗೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ನ್ಯಾಯಾಲಯ ಕಟ್ಟಡದ ವಿವಿಧ ಕೋಣೆಗಳನ್ನು ಪರೀಕ್ಷಿಸಿದರು.
ಬಾಂಬ್ ಪತ್ತೆದಳದ ಸಂಜಯ ಭೋವಿ ನೇತೃತ್ವದ ತಂಡದ ಸಿಬ್ಬಂದಿಗಳು ಪರಿಶೀಲನಾ ಕಾರ್ಯ ನೆರವೇರಿಸಿದರು.

ತಂಡದಲ್ಲಿದ್ದ ಬೆಳ್ಳಿಯು ತರಬೇತಿದಾರನ ನಿರ್ದೇಶನದ ಪ್ರಕಾರ ತನ್ನ ಪರಿಶೀಲನಾ ಕಾರ್ಯವನ್ನು ಶಿಸ್ತಿನಿಂದ ನಡೆಸಿತು. ಕೇವಲ 7 ವರ್ಷದ ಲೆಬ್ರಡೋಬ ಜಾತಿಗೆ ಸೇರಿದ ಶ್ವಾನವನ್ನು ಪ್ರದೀಪ ನಾಯ್ಕ ತರಬೇತಿ ನೀಡಿ ಸೇವೆಗೆ ಅಣಿಗೊಳಿಸಿದ್ದಾರೆ. ಶ್ವಾನವನ್ನು ತಂಡಕ್ಕೆ ಸೇರಿಸಿಕೊಂಡು 7 ವರ್ಷಗಳಾಗಿದೆ. ಸಿಬ್ಬಂದಿಗಳಾದ ಜಗನ್ನಾಥ ನಾಯ್ಕ, ಈರಪ್ಪ, ಶೇಖೋ ಪೂಜಾರಿ, ಸಂತೋಷ ಉಪಸ್ಥಿತರಿದ್ದರು.

RELATED ARTICLES  ಶಾಂತಿ ಸುವ್ಯವಸ್ಥೆ ಕಾಪಾಡಲು ಶಿರಸಿಯಲ್ಲಿ ಜೆಡಿಎಸ್ ನಿಂದ ಮನವಿ