ರಷ್ಯಾ -ಉಕ್ರೇನ್ ಯುದ್ಧದ ಪರಿಣಾಮ ಅಡುಗೆ ಎಣ್ಣೆ ದರ ಗಗನಕ್ಕೇರಿದೆ. ಕಳೆದ ಒಂದು ವಾರದಿಂದ ದಿನದಿಂದ ದಿನಕ್ಕೆ ಅಡುಗೆ ತೈಲ ದರ ಏರಿಕೆಯಾಗುತ್ತಿದ್ದು, ಕೆಲ ಪ್ರಾವಿಷನ್ ಸ್ಟೋರ್‌ಗಳಿಗೆ ಸ್ಟಾಕ್ ಕೂಡ ಕಡಿಮೆ ಬರುತ್ತಿದೆ. ರಷ್ಯಾ ಮತ್ತು ಉಕ್ರೇನ್ ನಡುವಿನ ಸಂಘರ್ಷದಿಂದ ಒಂದು ಲೀಟರ್ ಅಡುಗೆ ಎಣ್ಣೆ ದರ ಬರೋಬ್ಬರಿ 30-45 ರೂ ಏರಿಕೆಯಾಗಿದೆ ವರದಿಯಾಗಿದೆ. ಹೆಚ್ಚಿನ ಗ್ರಾಹಕರು ದರ ಹೆಚ್ಚಳದ ಆತಂಕದಿಂದಾಗಿ ಅಡುಗೆ ಎಣ್ಣೆ ಖರೀದಿಗೆ ಮುಗಿಬಿದ್ದಿರುವುದರಿಂದ ಅನೇಕ ಅಂಗಡಿ, ಮಾಲ್, ಸೂಪರ್ ಬಜಾರ್ ಗಳಲ್ಲಿ ಖರೀದಿಗೆ ಮಿತಿ ಹೇರಲಾಗಿದೆ ಎನ್ನಲಾಗಿದೆ.

RELATED ARTICLES  ಅತಿಥಿ ಶಿಕ್ಷಕರ ಕೈ ಸೇರದ ಸಂಬಳ, ಶಾಸಕರೇ ನೇರ ಹೊಣೆ: ಸೂರಜ್ ನಾಯ್ಕ ಸೋನಿ ಆರೋಪ.

ಸೂರ್ಯಕಾಂತಿ ಎಣ್ಣೆ ಮಾತ್ರವಲ್ಲದೆ ಇತರ ಖಾದ್ಯ ತೈಲ ದರ ಕೂಡ ಏರಿಕೆ ಕಂಡಿದೆ ಎಂದು ತಿಳಿದುಬಂದಿದೆ .

ಅಡುಗೆ ಎಣ್ಣೆ ದರಗಳು:
ಸನ್ ಫ್ಯೂರ್ ಎಣ್ಣೆ – 140- 180
ಗೋಲ್ಡ್ ವಿನ್ನರ್ – 145- 166
ಪಾಮ್ ಆಯಿಲ್ – 140- 160
ಶೇಂಗಾ ಎಣ್ಣೆ – 150- 185

RELATED ARTICLES  ಗೋಕರ್ಣದ ಪ್ರಧಾನ ತಂತ್ರಿಗಳಾಗಿದ್ದ ಶ್ರೀ ಶಿತಿಕಂಠ ಹಿರೇ ಇನ್ನಿಲ್ಲ.