ಭಟ್ಕಳ : ಬ್ರಹ್ಮೂರಿನ ವನದುರ್ಗಾ ದೇವಸ್ಥಾನದಲ್ಲಿ ನಡೆದಿರುವ ಚಂಡಿಹವನದ ನಿಮಿತ್ತ ಪೆರ್ಡೂರು ಮೇಳದವರಿಂದ ‘ಚಂದ್ರಹಾಸ’ ಯಕ್ಷಗಾನ ನೆರವೇರಿತು. ಯಕ್ಷಗಾನದ ಪೂರ್ವದಲ್ಲಿ ಸಭಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾ ಬಿಜೆಪಿ ಯುವಮೋರ್ಚಾ ಪ್ರಭಾರಿ ಪ್ರೊ. ಎಂ. ಜಿ. ಭಟ್ ಅವರು ದೀಪಬೆಳಗುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಸಂದರ್ಭದಲ್ಲಿ ಮಾತನಾಡಿದ ಅವರು ಸಾಹಿತ್ಯ ಕಲೆ ಉಳಿಸಿ ಬೆಳೆಸುವುದರಲ್ಲಿ ಹಳ್ಳಿಗಳು ಬಹಳ ಮುಂದೆಇದ್ದು, ಈ ಕಾರ್ಯ ನಿಜವಾಗಿಯೂ ಶ್ಲಾಘನೀಯ ಎಂದು ಅಭಿಪ್ರಾಯಪಟ್ಟರು.
ವನದುರ್ಗಾ ದೇವಸ್ಥಾನ ಕಮಿಟಿಯ ಅಧ್ಯಕ್ಷರಾಗಿರುವ ಶ್ರೀ ನಾರಾಯಣ ಭಟ್ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರಾಜ್ಯ ಬಿಜೆಪಿ ಮೀನುಗಾರರ ಪ್ರಕೋಷ್ಠದ ಸಂಚಾಲಕರಾಗಿರುವ ಶ್ರೀ ಹೂವಾ ಖಂಡೇಕರ್, ಜಿಲ್ಲಾ ಬಿಜೆಪಿ ಯುವಮೋರ್ಚಾ ಅಧ್ಯಕ್ಷರಾಗಿರುವ ಶ್ರೀ ಪ್ರಶಾಂತ ನಾಯಕ, ವನದುರ್ಗಾ ದೇವಸ್ಥಾನದ ಪ್ರಧಾನ ಅರ್ಚಕರಾಗಿರುವ ಶ್ರೀ ಕೃಷ್ಣ ಶಂಕರ ಭಟ್, ಗ್ರಾಮಪಂಚಾಯತ್ ಸದಸ್ಯ ಶ್ರೀ ಸಂದೇಶ ನಾಯ್ಕ್, ಗುತ್ತಿಗೆದಾರರಾಗಿರುವ ಶ್ರೀ ವೆಂಕಟರಮಣ ಕಾಶಿ ಹಾಗೂ ಕಾಸರಗೋಡಿನ ಶ್ರೀ ಶಿವಪ್ರಸಾದ್ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀ ಸುಬ್ರಾಯ ಹೆಗಡೆ ಅವರು ಸರ್ವರನ್ನು ಸ್ವಾಗತಿಸಿ, ಅತಿಥಿಗಳ ಕಿರುಪರಿಚಯ ಮಾಡಿದರು ಹಾಗೂ ಶ್ರೀ ಜಿ. ಆರ್. ಭಟ್ ಅವರು ಕಾರ್ಯಕ್ರಮದ ನಿರೂಪಣೆ ಹಾಗೂ ವಂದನಾರ್ಪಣೆ ಮಾಡಿದರು.