ಕುಮಟಾ : ಭಾರತದ ಪ್ರಮುಖ ಸಾಂಸ್ಕೃತಿಕ ಸಂಸ್ಥೆಯಾದ ಮುಂಬೈನ ನ್ಯಾಷನಲ್ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್ (NCPA) ಇವರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಗಾಯನ ವಿಭಾಗದಲ್ಲಿ ನೀಡುವ ಶಿಷ್ಯವೇತನಕ್ಕೆ ಕುಮಟಾದ ಯುವ ಪ್ರತಿಭೆ ತೇಜಸ್ವಿನಿ ದಿಗಂಬರ್ ವೆರ್ಣೇಕರ್ ಇವಳು ಆಯ್ಕೆಯಾಗಿದ್ದಾಳೆ. NCPA ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸಲು ಮತ್ತು ಪ್ರೋತ್ಸಾಹಿಸಲು 1969ರಲ್ಲಿ ಜೆ.ಆರ್.ಡಿ ಟಾಟಾ ಹಾಗೂ ಡಾ।। ಜಮ್ಷೆಡ್ ಭಾಭಾ (ಹೋಮಿ ಜಹಾಂಗೀರ್ ಭಾಭಾರ ಸಹೋದರ) ಇವರು ಸ್ಥಾಪಿಸಿದ ಭಾರತ ಉಪಖಂಡದ ಮೊಟ್ಟ ಮೊದಲ ಬಹುಪ್ರಕಾರ ಸಾಂಸ್ಕೃತಿಕ ಕೇಂದ್ರವಾಗಿದೆ. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಸಾಧನೆ ಮಾಡಿರುವ ದೇಶದ ಯುವಕಲಾವಿದರಿಗೆ ಉನ್ನತ ತರಬೇತಿಯನ್ನು ಪಡೆಯಲು ನೀಡುವ ಈ ಶಿಷ್ಯವೇತನದ ಮೊತ್ತ 1,20,000 ರೂಪಾಯಿಗಳು ಹಾಗೂ ಅವಧಿ 1 ವರ್ಷ. ತೇಜಸ್ವಿನಿಯು ಕುಮಟಾದ ದಿ. ಶಂಕರ್ ಲಕ್ಷ್ಮಣ್ ವೆರ್ಣೇಕರ್ ಹಾಗೂ ದಿ. ಸುಮಿತ್ರಾಬಾಯಿ ಇವರ ಮೊಮ್ಮಗಳಾಗಿದ್ದಾಳೆ.
ಕುಮಟಾದ ನಾದಶ್ರೀ ಕಲಾಕೇಂದ್ರ ಹಾಗೂ ಸಾಧನಾ ಸಂಗೀತ ವಿದ್ಯಾಲಯದ ಬಗ್ಗೋಣ ಇದರ ವಿದ್ಯಾರ್ಥಿಯಾಗಿದ್ದ ಇವಳು ಪ್ರಸ್ತುತವಾರಾಣಸಿಯ ಕಾಶಿ ಹಿಂದೂ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಶಿಕ್ಷಣವನ್ನು ಪಡೆಯುತ್ತಿದ್ದಾಳೆ.