ಅಂಕೋಲಾ : ಕಾನೂನು ಬಾಹಿರವಾಗಿ ಬಾಡಿಗೆಗೆ ಬಳಸುತ್ತಿರುವ ಖಾಸಗಿ ವಾಹನಗಳ ಮೇಲೆ ಮತ್ತು ನಿಯಮ ಮೀರಿ ಬಾಡಿಗೆ ಓಡಿಸುತ್ತಿರುವ ಆಟೋ ರಿಕ್ಷಾಗಳ ಮೇಲೆ ಕ್ರಮ ತೆಗೆದುಕೊಳ್ಳುವಂತೆ ಶ್ರೀಸಿದ್ಧಿ ವಿನಾಯಕ ಟ್ಯಾಕ್ಸಿ ಚಾಲಕರ ಮತ್ತು ಮಾಲಕರ ಸಂಘ ಸಿಪಿಐ ಸಂತೋಷ ಶೆಟ್ಟಿ ಅವರಿಗೆ ಮನವಿ ನೀಡಿ ಒತ್ತಾಯ ಮಾಡಿದೆ. ಕೊರೋನಾ, ಬೆಲೆ ಏರಿಕೆ ಮತ್ತಿತರ ಕಾರಣದಿಂದ ಟ್ಯಾಕ್ಸಿ ಚಾಲಕರು ಮತ್ತು ಮಾಲಕರು ಬಾಡಿಗೆ ಇಲ್ಲದೇ ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಬ್ಯಾಂಕ್ ಸಾಲ ಮತ್ತು ತೆರಿಗೆ ಹಣ ಪಾವತಿಗೂ ಕಷ್ಟ ಅನುಭವಿಸುತ್ತಿದ್ದಾರೆ. ಇಂತಹ ಸ್ಥಿತಿಯಲ್ಲಿ ಕೆಲ ಖಾಸಗಿ ವಾಹನಗಳು ಕಾನೂನು ಮೀರಿ ಬಾಡಿಗೆ ಹೊಡೆಯುತ್ತಿದ್ದಾರೆ. ಇದೇ ರೀತಿ ಕೆಲ ಆಟೋರಿಕ್ಷಾಗಳೂ ಸಹ ತಮ್ಮ ಪರವಾನಿಗೆಯ ನಿಯಮ ಮೀರಿ ದೂರದ ಊರುಗಳಿಗೆ ಬಾಡಿಗೆ ಹೋಗುತ್ತಿದ್ದಾರೆ. ಇದರಿಂದಾಗಿ ನಮ್ಮಬದುಕು ಶೋಚನೀಯವಾಗಿದೆ. ಕಾರಣ ಈ ಬಗ್ಗೆ ತುರ್ತು ಕ್ರಮ ತೆಗೆದುಕೊಳ್ಳಬೇಕು. ಖಾಸಗಿ ವಾಹನಗಳ ಮೇಲೆ ನಿಗಾ ಇಡಬೇಕು. ಆಟೋ ರಿಕ್ಷಾಗಳಿಗೆ ಅಂಕೋಲಾ ಗಡಿ ಮೀರಿ ಬಾಡಿಗೆ ಹೋಗದಂತೆ ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯ ಮಾಡಿದ್ದಾರೆ.
ಶ್ರೀಸಿದ್ಧಿ ವಿನಾಯಕ ಟ್ಯಾಕ್ಸಿ ಚಾಲಕರ ಮತ್ತು ಮಾಲಕರ ಸಂಘದ ಅಧ್ಯಕ್ಷ ಪ್ರವೀಣ ಎಂ.ನಾಯ್ಕ, ಉಪಾಧ್ಯಕ್ಷ ಅಜಿತ ಜಿ.ನಾಯ್ಕ, ಕಾರ್ಯದರ್ಶಿ ರಾಘವೇಂದ್ರ ನಾಯ್ಕ, ಸಹ ಕಾರ್ಯದರ್ಶಿ ಚಂದ್ರಕಾಂತ ನಾಯ್ಕ, ಕೋಶಾಧ್ಯಕ್ಷ ಅಶೋಕ ನಾಯ್ಕ, ಪ್ರಮುಖರಾದ ಜಾಹಿರ್ ಶೇಖ, ಹರೀಶ ನಾಯ್ಕ, ಮಹಾದೇವ ತಳೇಕರ್ ಮತ್ತಿತರರು ಇದ್ದರು.