ಹೊನ್ನಾವರ : ಶಿರಸಿಯ ಸುಪ್ರಸಿದ್ಧ  ನಾಟ್ಯಾಂಜಲಿ ಕಲಾಕೇಂದ್ರ  ಹೊನ್ನಾವರ ಶಾಖೆಯ ಮುಖ್ಯ ಗುರುಗಳಾದ  ವಿದುಷಿ ವಿನುತಾ ರಾಘವೇಂದ್ರ ಹೆಗಡೆ ಹಾಗೂ ಕೇಂದ್ರದ ವಿದ್ಯಾರ್ಥಿಗಳು, ಸಹಶಿಕ್ಷಕರು ಹಾಗೂ ಪಾಲಕ ವೃಂದದ ಸಹಕಾರದಲ್ಲಿ ‘ ನೂಪುರ ನಾದ ‘ ಹೆಸರಿನಲ್ಲಿ  ವಾರ್ಷಿಕೋತ್ಸವ ಬಹು ಸುಂದರವಾಗಿ ಸಂಪನ್ನಗೊಂಡಿತು. ಈ ಸಮಾರಂಭದಲ್ಲಿ ನಾಗರಿಕ ಪತ್ರಿಕೆಯ ಸಂಪಾದಕ ಕೃಷ್ಣಮೂರ್ತಿ ಹೆಬ್ಬಾರ್,  ಶಿವಾನಿ ಟ್ರೇಡರ್ಸ್ ಮಾಲಿಕ ಕೃಷ್ಣಮೂರ್ತಿ ಭಟ್ ಹಾಗೂ ನಿವೃತ್ತ ಪ್ರಿನ್ಸಿಪಾಲ ಎ.ವಿ. ಶಾನಭಾಗ್, ಭಾವನಾ ವಾಹಿನಿಯ ಜನಪ್ರಿಯ ವರದಿಗಾರ ವೆಂಕಟೇಶ್ ಮೇಸ್ತ ಅತಿಥಿಗಳಾಗಿ ಭಾಗವಹಿಸಿ ಸಂಘಟಕರಿಗೆ ಶುಭಕೋರಿದರು. ಈ ಸಮಾರಂಭದಲ್ಲಿ ಅಕಾಲದಲ್ಲಿ ಅಗಲಿದ ನೃತ್ಯ ವಿದುಷಿ ಶ್ರೀಮತಿ ಸೌಮ್ಯ ಅರವಿಂದ್ ಅವರ ಸ್ಮಾರಕ ‘ ಸೌಮ್ಯ ಸಿರಿ ‘ ವಾರ್ಷಿಕ ಪ್ರಶಸ್ತಿಯನ್ನು ಕೇಂದ್ರದ ಅತ್ಯುತ್ತಮ ವಿದ್ಯಾರ್ಥಿ ಕುಮಾರಿ ಸಾನ್ವಿ ರಾವ್ ಅವರಿಗೆ ಅತಿಥಿಗಳ ಉಪಸ್ಥಿತಿಯಲ್ಲಿ ನೀಡಿ ಸನ್ಮಾನಿಸಲಾಯಿತು. ಮತ್ತು ಈ ಸಂದರ್ಭದಲ್ಲಿ ವಿದುಷಿ ವಿನುತಾ ಹೆಗಡೆ ಹಾಗೂ ವಿವಿಧ ಗ್ರಾಮಾಂತರ ನಾಟ್ಯ ಕೇಂದ್ರಗಳ ಗುರುಗಳಿಗೆ ಶಿಷ್ಯರು ಸೇರಿ ಗುರುವಂದನೆ ಸಲ್ಲಿಸಿದರು.

RELATED ARTICLES  ರಾಮಚಂದ್ರಾಪುರ ಮಠಕ್ಕೆ ಬ್ಲ್ಯಾಕ್‍ಮೇಲ್: ಆರೋಪ ಕೈಬಿಡುವಂತೆ ಕೋರಿದ್ದ ಅರ್ಜಿ ವಜಾ

ರಾಘವೇಂದ್ರ ಹೆಗಡೆ ಸ್ವಾಗತಿಸಿದರು. ಹರ್ಷಿತಾ ಹೆಗಡೆ ಕಾರ್ಯಕ್ರಮ ನಿರೂಪಿಸಿದರೆ ರಾಜೇಶ್ವರಿ ಭಟ್ ವಂದಿಸಿದರು. ವಿದುಷಿ ವಿನುತಾ ಹೆಗಡೆ ಹಾಗೂ ಕುಮಾರಿ ವಾಣಿ ಅವರ ನೇತೃತ್ವದಲ್ಲಿ ಸೊಗಸಾಗಿ ಮೂಡಿಬಂದ ಚಕ್ರವ್ಯೂಹ ನೃತ್ಯ ರೂಪಕ ಹಾಗೂ  ವಿದ್ಯಾರ್ಥಿಗಳ ಭರತನಾಟ್ಯದ ಅಲರಿಪು, ಜತಿಸ್ವರ, ಶ್ಲೋಕ, ದೇವರನಾಮಗಳು, ವರ್ಣಂ, ದೇವಿಕೃತಿ ಮುಂತಾದ ನೃತ್ಯ ಬಂಧಗಳ ಆಕರ್ಷಕ ಪ್ರದರ್ಶನ ನೋಡುಗರ ಮನ ಸೆಳೆದವು.

RELATED ARTICLES  ಸೇತುವೆ ಹಾಗೂ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಶಾಸಕಿ ಶಾರದಾ ಶೆಟ್ಟಿ.