ಶಿರಸಿ : ಜಾತ್ಯತೀತ ಜನತಾದಳವು ಸಂಘಟನೆಯನ್ನು ಧಾರ್ಮಿಕ ಭಾವನೆಯ ಮೇಲಾಗಲಿ, ಹಣದ ಬಲದ ಮೇಲಾಗಲಿ ಸಂಘಟಿಸುವ ಅವಶ್ಯಕತೆ ಇಲ್ಲ. ಪ್ರಾದೇಶಿಕ ಸಮಸ್ಯೆಗಳಿಗೆ ಪರಿಹಾರವು ಜನತಾದಳ ಪಕ್ಷದಿಂದ ಮಾತ್ರ ಸಾಧ್ಯ. ಪ್ರಾದೇಶಿಕ ಸಮಸ್ಯೆಗಳಿಗೆ ಸ್ಪಂದಿಸುವ ಮೂಲ ಉದ್ದೇಶ ಜನತಾದಳ ಹೊಂದಿರುವುದಾಗಿದೆ ಎಂದು ಯಲ್ಲಾಪುರ ವಿಧಾನಸಭಾ ಕ್ಷೇತ್ರ ಸಂಘಟನೆ ಉಸ್ತುವಾರಿ ರವೀಂದ್ರ ನಾಯ್ಕ ಹೇಳಿದರು.

ಬನವಾಸಿ ಘಟಕದ ಹಲಗದ್ದೆ ಕೊರ್ಲಕಟ್ಟಾ ಗ್ರಾ.ಪಂ ವ್ಯಾಪ್ತಿಯ ಕೋರ್ಲಕಟ್ಟಾದ ತೇಲಂಗ ಸಭಾಂಗಣದಲ್ಲಿ ಜರುಗಿದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ರಾಜ್ಯದ ಅನೇಕ ಸಮಸ್ಯೆಗಳನ್ನು ಜನತಾದಳ ಸರ್ಕಾರ ಸ್ಪಂದಿಸಿದ್ದು ಶೈಕ್ಷಣಿಕ ಕ್ಷೇತ್ರದಲ್ಲಿ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿರುವ ಅವಧಿಯಲ್ಲಿ 1000 ಪ್ರಾಥಮಿಕ ಶಾಲೆ, 500 ಪ್ರೌಢಶಾಲೆ, 400 ಪ.ಪೂ ಕಾಲೇಜು 186 ಪದವಿ ಕಾಲೇಜು 7 ಇಂಜಿಯರಿಂಗ್ ಕಾಲೇಜು ಹಾಗೂ 6 ಮೆಡಿಕಲ್ ಕಾಲೇಜು ಪ್ರಾರಂಭಿಸಿ ಗ್ರಾಮೀಣ ಭಾಗದ ಶೈಕ್ಷಣಿಕ ಕ್ರಾಂತಿಯನ್ನು ಮಾಡಿರುವುದು ರಾಜ್ಯ ಸರ್ಕಾರದ ಆಡಳಿತದಲ್ಲಿ ಇತಿಹಾಸ ಆಗಿದೆ. ಈ ದಿಶೆಯಲ್ಲಿ ಪಕ್ಷವನ್ನು ಬಲವಾಗಿ ಸಂಘಟಿಸಬೇಕೆಂದು ಹೇಳಿದರು.

RELATED ARTICLES  ಗೋಕರ್ಣದ ಡಾ . ನಾರಾಯಣ ಸದಾಶಿವ ಭಟ್ಟರಿಗೆ ಅಂತರಾಷ್ಟ್ರೀಯ ಪುರಸ್ಕಾರ

ಸಭೆಯ ಅಧ್ಯಕ್ಷತೆಯನ್ನು ಜೆಡಿಎಸ್. ಹಿರಿಯ ನಾಯಕ ಉಲ್ಲಾಸ ತೇಲಂಗರವರು ವಹಸಿದ್ದರು. ಶ್ರೀಧರ ನಾಯ್ಕ ದೇವರಾಜ ಎಂ. ಆರ್. ನಾಯ್ಕ ಕಂಡ್ರಾಜಿ, ಅಣ್ಣಪ್ಪ ನಾಯಕ ಮರಗುಂಡಿ, ಮೋಹನ ನಾಯ್ಕ ಅಂಡಗಿ, ಮುಂತಾದವರು ಇದ್ದರು.

RELATED ARTICLES  ಅಪರಿಚಿತ ವಾಹನ ಬಡಿದು ಪ್ರಯಾಣಿಕನ ಕೈ ತುಂಡು : ಅಂಕೋಲಾದಲ್ಲಿ ದೂರು ದಾಖಲು.