ಕುಮಟಾ : ದಿನಾಂಕ:19-3-2022 ರಂದು ರಾತ್ರೆ ಕುಮಟಾ ತಾಲೂಕಿನ ಯಲವಳ್ಳಿ ಗ್ರಾಮದ ಮರಾಠಿಕೊಪ್ಪಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ರವರು ಕುಂಬ್ರಿ ಮರಾಠಿ ಜನರು ನಡೆಸಿಕೊಂಡು ಬರುತ್ತಿರುವ ಸುಗ್ಗಿ ನೃತ್ಯವನ್ನು ವೀಕ್ಷಿಸಿದರು. ಇಲ್ಲಿನ‌ ಊರ ಗೌಡ ಮಂಜುನಾಥ ಮರಾಠಿರವರ ಮನೆಗೆ ಭೇಟಿ ನೀಡಿ , ಮನೆಯ ಅಂಗಳದಲ್ಲಿ ಪ್ರತಿ ವರ್ಷ ಹೋಳಿಯ ಸಮಯದಲ್ಲಿ ಕೃಷ್ಣ ಶಿವಗ್ಯ ಮರಾಠಿ ರವರ ಮುಂದಾಳತ್ವದಲ್ಲಿ ನಡೆಯುವ ಸುಗ್ಗಿ ಕುಣಿತ ಸಾಂಪ್ರದಾಯಿಕ ನೃತ್ಯವನ್ನು ತಡ ರಾತ್ರೆಯವರೆಗೆ ವೀಕ್ಷಿಸಿದರು. ನಂತರ ಊರ ಹಿರಿಯರಿಂದ ಕುಂಬ್ರಿ ಮರಾಠಿ ಜನಾಂಗದ ಆಚಾರ , ವಿಚಾರ, ಸಂಪ್ರದಾಯ ಹಾಗೂ ಸುಗ್ಗಿ ಆಚರಣೆ ಬಗ್ಗೆ ಮಾಹಿತಿ ಪಡೆದರು. ಈ ಸಂದರ್ಬದಲ್ಲಿ ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರಾದ ಜಯಂತ್ ಜೊತೆಗಿದ್ದರು.

RELATED ARTICLES  ಕನ್ನಡ ಪ್ರೇಮ ಮೆರೆದ ಮಕ್ಕಳು