ಮುಂಡಗೋಡ : ತಾಲೂಕಿನ ಹನುಮಾಪುರ ಗ್ರಾಮದಲ್ಲಿ ರಮೇಶ ಮಾಳಾಪುರ ಎಂಬ ವ್ಯಕ್ತಿಯ ಮಗಳು ಬಟ್ಟೆ ತೊಳೆದು ಇಟ್ಟಿದ್ದು, ಆ ಬಟ್ಟೆಗಳನ್ನು ಬಿಸಿಲಿಗೆ ಹರವಲು ಹೋದ ಸಂದರ್ಭದಲ್ಲಿ ಆತನಿಗೆ ವಿದ್ಯುತ್ ಶಾಕ್ ತಗುಲಿ ಮೃತಪಟ್ಟ ಘಟನೆ ನಡೆದಿದೆ. ಈತನು ಬೆಳಗ್ಗೆಯ ಸಮಯದಲ್ಲಿ ತೊಳೆದುಹಾಕಿದ ತನ್ನ ಮಗಳ ಬಟ್ಟೆಯನ್ನು ತಮ್ಮ ಮನೆಯ ಹಿತ್ತಲಿನಲ್ಲಿ ಒಣಗಿಸಲು ಹೋದಾಗ ಮನೆಯ ವಿದ್ಯುತ್ ತಂತಿ ಸ್ಪರ್ಶಿಸಿದ ಕಾರಣ ಜೋರಾಗಿ ಕೂಗಾಡಿದ್ದಾರೆ. ಮನೆಯವರು ಬರುವಷ್ಟರಲ್ಲಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಸಹೋದರರು ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.

RELATED ARTICLES  ದೀವಗಿಯಲ್ಲಿ ಮಹಾಶಿವರಾತ್ರಿ ಹಬ್ಬದ ಅಂಗವಾಗಿ ಜ್ಯೋತಿರ್ಲಿಂಗ ರಥಯಾತ್ರೆ : ವಿಶೇಷವಾಗಿ ನಡೆದ ಕಾರ್ಯಕ್ರಮ.